ARTICLE: ಹದಿಹರೆಯದವರು ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಿದ್ದಾರೆ?
ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ ಅದೂ ಪ್ರಮುಖವಾಗಿ 15-29 ವಯಸ್ಸಿನವರಲ್ಲಿ. ಸರ್ಕಾರ ಈ ಸಮಸ್ಯೆಯ ಬಗ್ಗೆ ತುರ್ತಾಗಿ ಗಮನ ಕೊಡಬೇಕಿದೆ.
ಇತ್ತೀಚೆಗೆ ಸರ್ಕಾರ ಈ ನೀಟಿನಲ್ಲಿ ರಾಷ್ಟ್ರೀಯ ಆತ್ಮಹತ್ಯೆ ನಿಯಂತ್ರಣ ನೀತಿಯನ್ನೂ ಪ್ರಕಟಿಸಿತ್ತು. ಅನ್ಯ ದೇಶಗಳಂತೆ ಭಾರತದಲ್ಲಿ ಆತ್ಮಹತ್ಯೆಗೆ ಮಾನಸಿಕ ಆರೋಗ್ಯದ ಸಮಸ್ಯೆ ಒಂದೇ ಕಾರಣವಲ್ಲ. ಇಲ್ಲಿ ಆತ್ಮಹತ್ಯೆಗೆ ಹೆಚ್ಚಾಗಿ ಸಾಮಾಜಿಕ-ಸಾಂಸ್ಕೃತಿಕ ಕಾರಣಗಳೂ ಇವೆ.
ಭಾರತದಲ್ಲಿ ಯುವಕರ ಆತ್ಮಹತ್ಯೆಗೆ ಶೈಕ್ಷಣಿಕ ವೈಫಲ್ಯವೂ ಹೆಚ್ಚು ಕಾರಣವಾಗುತ್ತಿದೆ. ಇದರಿಂದ ಯುವಜನತೆಯನ್ನು ಹೊರತರಲು ಅಂಕಗಳಿಗೆಯ ಒತ್ತಡದ ಹೊರತಾಗಿ, ಪರ್ಯಾಯ ಕೌಶಲ್ಯ ವೃದ್ಧಿ ಮೂಲಕ ಆ ಮಗುವಿನಲ್ಲಿನ ಸಂಪೂರ್ಣ ಸಾಮರ್ಥ್ಯ ಹೊರತರುವ ಕೆಲಸ ಮಾಡಬೇಕಿದೆ. ಇದಷ್ಟೇ ಅಲ್ಲದೇ ಕೌಟುಂಬಿಕ ಸಮಸ್ಯೆಗಳೂ ಇದ್ದು ಆತ್ಮಹತ್ಯೆಗಳಿಗೆ ವಿಭಿನ್ನ ಸಮಸ್ಯೆಗಳೂ ಕಾರಣವಾಗುತ್ತವೆ. ಆದರೆ ನಾವು ಇದನ್ನು ಹಲವು ಬಾರಿ ನಿರ್ಲಕ್ಷ್ಯಿಸುತ್ತೇವೆ, ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ.
ಮಾನಸಿಕ ಆರೋಗ್ಯವನ್ನು ಒಂದು ರೀತಿಯ ಕಳಂಕ ಎಂಬಂತೆ ನೋಡುವುದರಿಂದ ಸಮಾಜ ಮುಂದೆ ಬಂದಿದ್ದು, ಇಂದಿನ ಯುವಕರು ಮಾನಸಿಕ ಆರೋಗ್ಯಕ್ಕೆ ಅಗತ್ಯವಿರುವ ಚಿಕಿತ್ಸೆ, ನೆರವನ್ನು ಆರಂಭಿಕ ಹಂತಗಳಲ್ಲೇ ಪಡೆಯಲು ಮುಂದಾಗುತ್ತಿದ್ದಾರೆ.
ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವುದೇ ಒಂದು ರೀತಿಯ ಅಪಖ್ಯಾತಿ ಎಂಬ ಮನೋಭಾವನೆ
ಇದ್ದಾಗ ಅದನ್ನು ಸಾರ್ವಜನಿಕ ಸಂವಹನದಲ್ಲಿ ಹಾಗೂ ಕೌಟುಂಬಿಕ ಸಂವಹನಗಳಲ್ಲಿ
ಪ್ರಸ್ತಾಪಿಸಲಾಗುತ್ತಿರುವ ಮಟ್ಟಿಗೆ ಅರಿವು ಮೂಡಿರುವುದರ ಹಿಂದೆ ಸೆಲಬ್ರಿಟಿಗಳ ಪಾತ್ರವೂ
ಮಹತ್ವದ್ದಾಗಿದೆ ಎನ್ನುತ್ತಾರೆ ನಿಮ್ಹಾನ್ಸ್ ನ, ಬಿಹೇವಿಯರಲ್ ಸೈನ್ಸ್ ವಿಭಾಗದ ಡೀನ್
ಮನೋವೈದ್ಯಶಾಸ್ತ್ರದ ಪ್ರೊಫೆಸರ್ ಪ್ರಭಾ ಎಸ್ ಚಂದ್ರ.