ARREST: ಬೀಚ್ ಗೆ ತೆರಳಿದ್ದ ವಿದ್ಯಾರ್ಥಿಗಳಿಗೆ ಹಲ್ಲೆ: ಮಂಗಳೂರಿನ  ಇಬ್ಬರ ಬಂಧನ

ARREST: ಬೀಚ್ ಗೆ ತೆರಳಿದ್ದ ವಿದ್ಯಾರ್ಥಿಗಳಿಗೆ ಹಲ್ಲೆ: ಮಂಗಳೂರಿನ ಇಬ್ಬರ ಬಂಧನ

 

ಮಂಗಳೂರು: ಪಣಂಬೂರು ಬೀಚ್ ಗೆ ಹೋಗಿದ್ದ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಇಬ್ಬರನ್ನು ಮಂಗಳೂರು ಪೊಲೀಸರು ‌ಬಂಧಿಸಿದ್ದಾರೆ.ಮಂಗಳೂರಿನ‌ ಅಳಪೆ ಮಠದ ಹತ್ತಿರದ ನಿವಾಸಿ ದೀಕ್ಷಿತ್ ಯಾನೆ ದೀಕ್ಷಿತ್ ಅಳಪೆ (32) ಮತ್ತು  ಅಳಪೆ ಬಜಾಲ್ ನ ಲಾಯ್ಡ್ ಪಿಂಟೋ (32) ಬಂಧಿತರು.

ಜುಲೈ 21  ರಂದು   ಮಂಗಳೂರಿನ  ಬ್ಯಾಚುಲರ್ ಆಫ್ ಹಾಸ್ಪಿಟಲ್ ಆ್ಯಡ್ಮೀಸ್ಟ್ರೇಷನ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು  ತಮ್ಮ  ಸ್ನೇಹಿತರೊಂದಿಗೆ  ಪಣಂಬೂರು  ಬೀಚ್ ಗೆ ಹೋಗಿ  ವಾಪಾಸ್ಸು  ಬರುವಾಗ ಅವರನ್ನು  ಆರೋಪಿಗಳು  ಹಿಂಬಾಲಿಸಿಕೊಂಡು  ಬಂದಿದ್ದರು.   ಬಿಜೈ ಕಾಪಿಕಾಡ್ ನ 7 ನೇ ಕ್ರಾಸ್ ನಲ್ಲಿ  ವಿದ್ಯಾರ್ಥಿಗಳನ್ನು ತಡೆದು  ಅವಾಚ್ಯ  ಶಬ್ದಗಳಿಂದ  ಬೈದು  ಹಲ್ಲೆ  ನಡೆಸಿದ್ದರು. ಈ   ಘಟನೆಗೆ  ಸಂಬಂದಿಸಿದಂತೆ  ಉರ್ವಾ  ಪೊಲೀಸ್  ಠಾಣೆಯಲ್ಲಿ  ಪ್ರಕರಣ  ದಾಖಲಾಗಿತ್ತು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್  ಮತ್ತು  ಮೊಬೈಲ್  ಪೋನ್  ಗಳನ್ನು ವಶಪಡಿಸಲಾಗಿದೆ.  ಪ್ರಕರಣದ  ತನಿಖೆ  ಮುಂದುರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ