ELECTION: ರಾಜಕೀಯ ಪಕ್ಷಗಳಿಂದಲೇ ಮತದಾರರಿಗೆ ಆಮಿಷ: ಸ್ಪಷ್ಟ ನೀತಿ ತರಲು ಆಯೋಗಕ್ಕೆ ಮನವಿ

ELECTION: ರಾಜಕೀಯ ಪಕ್ಷಗಳಿಂದಲೇ ಮತದಾರರಿಗೆ ಆಮಿಷ: ಸ್ಪಷ್ಟ ನೀತಿ ತರಲು ಆಯೋಗಕ್ಕೆ ಮನವಿ

 

ಚುನಾವಣೆ ಸಂದರ್ಭ ಹಣಕಾಸು ನೆರವು ಗ್ಯಾರಂಟಿ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ರಾಜಕೀಯ ಪಕ್ಷಗಳ ಮೇಲೆ ನಿಗಾ ವಹಿಸಲು ಸೂಕ್ತ ನಿಯಾಮವಳಿ ರೂಪಿಸುವಂತೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸಾಮಾಜಿಕ ಮುಖಂಡ ಪ್ರಭಾಕರ ಪ್ರಭು ಭಾರತದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಅವರು ನೀಡಿದ ಮನವಿಯಲ್ಲಿನ ಪ್ರಮುಖ ವಿಚಾರಗಳು ಇವು.

ಇತ್ತೀಚಿನ ಲೋಕಸಭೆ ಚುನಾವಣೆ, ವಿಧಾನಸಭೆ ಚುನಾವಣೆಗಳಿಗೆ ಸಂಬಂಧಿಸಿದಂತೆ, ಕೆಲವೊಂದು ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭ ಪಕ್ಷದ ಪ್ರಣಾಳಿಕೆ ಹೆಸರಲ್ಲಿ ಹೊರತರುವ ಭರವಸೆಗಳ ಪಟ್ಟಿಯಲ್ಲಿ ನಮ್ಮ ಪಕ್ಷ ಆಡಳಿತಕ್ಕೆ  ಬಂದರೆ ಮತದಾರರಿಗೆ ಮಾಸಿಕವಾಗಿ ಅಥವಾ ವಾರ್ಷಿಕವಾಗಿ ಇಂತಿಷ್ಟು ಹಣಕಾಸು ನೆರವು ನೀಡುತ್ತೇವೆ ಎಂಬುದಾಗಿ ಗ್ಯಾರಂಟಿ ಯೋಜನೆಯ ಹೆಸರಿನಡಿಯಲ್ಲಿ ಗ್ಯಾರಂಟಿ ಕಾರ್ಡುಗಳನ್ನು ವಿತರಿಸಿ ಮತದಾರರನ್ನು ಹಣದ ಆಮಿಷಕ್ಕೆ ಒಳಗಾಗುವಂತೆ ಪ್ರೇರೇಪಣೆ ನೀಡುತ್ತಿರುವುದು ಕಂಡುಬರುತ್ತಿದೆ. ರಾಜಕೀಯ ಪಕ್ಷಗಳ ಕೆಟ್ಟ ಪದ್ದತಿಯಿಂದಾಗಿ ಹಲವು ಪ್ರಜ್ಞಾವಂತ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಲ್ಲಿ ತನ್ನ ಸ್ವಂತ ತಿಳುವಳಿಕೆಯ ನಿರ್ಧಾರದಿಂದ ಹೊರಬಂದು ಹಣ ಗಳಿಸುವ ದುರಾಸೆಗೆ ಬಲಿಯಾಗುತ್ತಿದ್ದು,ತನ್ನ ಜನ್ಮಸಿದ್ದ  ಮತದಾನದ ಹಕ್ಕನ್ನು ಹಣದ ಆಮಿಷಗಳಿಗೆ ,ಆಶೆಗಳಿಗೆ ನೀಡುತ್ತಿರುವುದರಿಂದ ನೈಜ ಪ್ರಜಾಪ್ರಭುತ್ವ  ಆಶಯಗಳಿಗೆ ಧಕ್ಕೆ ತರುವಂತಾಗಿದೆ ಎಂದು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ನಿಯಾಮವಳಿಯಂತೆ ಚುನಾವಣೆ ಸಂಧರ್ಭ ಮತದಾರರಿಗೆ ಹಣ ನೀಡುವಂತಿಲ್ಲ. ಹೆಂಡ ಹಂಚುವಂತಿಲ್ಲ ಇತ್ಯಾದಿ ಮುಂತಾದವುಗಳಿಂದ ಮತದಾರರ ಮೇಲೆ ಪ್ರಭಾವ ಬೀರುವಂತಿಲ್ಲ ಎಂದು ಇರುವುದಾಗಿದೆ. ರಾಜಕೀಯ ಪಕ್ಷಗಳು ಚುನಾವಣಾ ಸಂಧರ್ಭ ಬಹಿರಂಗವಾಗಿಯೇ ಪ್ರತಿ ಮತದಾರರಿಗೆ ವಾರ್ಷಿಕವಾಗಿ, ಮಾಸಿಕವಾಗಿ ಹಣವನ್ನು ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎಂದು ಭರವಸೆ ನೀಡುತ್ತಿರುವುದು ಸಹ ಚುನಾವಣಾ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಂತೆ ಗೋಚರಿಸುತ್ತಿದೆಇದರಿಂದ ದೇಶ ಹಾಗೂ ರಾಜ್ಯಗಳ ಆರ್ಥಿಕ ವ್ಯವಸ್ಥೆಯಲ್ಲಿ ಸಮತೋಲನ ಕಳೆದುಕೊಳ್ಳಲಿದ್ದು ,ನಿತ್ಯ ನಿರಂತರವಾದ ಅತ್ಯವಶ್ಯಕವಾದ ವ್ಯವಸ್ಥೆಗಳ ಅನುಷ್ಠಾನದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿವೆ ಎಂದು ವಿವರಿಸಿದ್ದಾರೆ.

ವಿಷಯದ ಬಗ್ಗೆ ಚುನಾವಣೆ ಆಯೋಗದ ಮೃದು ಧೋರಣೆಯ ನಿಯಮ ಸಡಿಲಿಕೆಯ ಕ್ರಮವನ್ನು ಪ್ರಜ್ಞಾವಂತ ವ್ಯಕ್ತಿಗಳು ಅಲ್ಲಲ್ಲಿ ಸಾರ್ವಜನಿಕವಾಗಿ ,ಬಹಿರಂಗವಾಗಿ ಚುನಾವಣಾ ಆಯೋಗದ ಕಾರ್ಯ ವೈಖರಿ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾ, ಕಡಿವಾಣಕ್ಕೆ ಕಟ್ಟುನಿಟ್ಟಿನ ನಿಯಾಮವಳಿಗಳನ್ನು ರೂಪಿಸುವ ಬಗ್ಗೆ ಮಾತಾನಾಡುತ್ತಿದ್ದಾರೆ.   ಎಲ್ಲಾ ಅಂಶಗಳಿಂದ ಚುನಾವಣಾ ಆಯೋಗವು ಪ್ರಸ್ತುತ ಇರುವ ಮಾದರಿ ನೀತಿ ಸಂಹಿತೆಯ ಕ್ರಮಗಳನ್ನು ಪರಿಷ್ಕ್ರತಗೊಳಿಸಿ ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭ ಸಾರ್ವಜನಿಕವಾಗಿ ಅಭಿವೃದ್ದಿ ವಿಷಯ ಹೊರತಾಗಿ ವೈಯಕ್ತಿಕವಾಗಿ ಹಣಕಾಸು ನೆರವು ಸೇರಿದಂತೆ ಇನ್ನಿತರ ವೈಯಕ್ತಿಕ ನೆರವುಗಳನ್ನು ಘೋಷಣೆ ಮಾಡುವುದನ್ನು ಕಟ್ಟುನಿಟ್ಟಾಗಿ ತಡೆ ಹಿಡಿಯಬೇಕು ಹಾಗೆ ಮಾಡಿದ್ದಲ್ಲಿ ರಾಜಕೀಯ ಪಕ್ಷಗಳ ಮಾನ್ಯತೆ ರದ್ದುಗೊಳಿಸಿ ಅಂತಹ ರಾಜಕೀಯ ಪಕ್ಷಗಳ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ಅಮಾನ್ಯಗೊಳಿಸುವ ನಿಟ್ಟಿನಲ್ಲಿ ಹಾಗೂ ಪ್ರಜಾಪ್ರಭುತ್ವದ ಅಸ್ತಿತ್ವಕ್ಕಾಗಿ ಒಂದು ಸಮರ್ಪಕವಾದ ,ನ್ಯಾಯ ಸಮ್ಮತವಾದ ಕಾನೂನು ,ನಿಯಾಮವಳಿ ರೂಪಿಸಬೇಕೇಂದು ಮೂಲಕ ವಿನಂತಿ ಎಂದವರು ತಿಳಿಸಿದ್ದಾರೆ.



Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ