Protest: ಬೀಡಿ ಸಿಗ್ತಾ ಇಲ್ಲ ಎಂದು ಕೈದಿಗಳ ತಕರಾರು!!!
Monday, September 2, 2024
ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಜೈಲಿನಲ್ಲಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ. ಬೀಡಿ ಸಿಗುತ್ತಿಲ್ಲ ಎಂದು ಕೈದಿಗಳು ಪಟ್ಟು ಹಿಡಿದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ತಂಬಾಕು, ಪಾನ್ ಬೀಡಾ ಇಲ್ಲದಿದ್ದರೆ ನಾವು ಬದುಕುವುದು ಕಷ್ಟ. ಊಟ, ಉಪಾಹಾರ ಬಿಡುತ್ತೇವೆ, ಹೊರತು ಪಾನ್ ಬೀಡಾ, ತಂಬಾಕು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಜೈಲಿನಲ್ಲಿ ಪಾನ್ ಬೀಡಾ, ತಂಬಾಕು ಒದಗಿಸದಿದ್ದರೆ ಜೈಲಿನ ಹೊರಗೂ ಅವುಗಳನ್ನು ನಿಷೇಧಿಸಬೇಕು.ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಈಗಾಗಲೇ ಇಂಥ ಕ್ರಮ ಕೈಗೊಳ್ಳಲಾಗಿದೆ. ಅದೇ ಕ್ರಮವನ್ನು ರಾಜ್ಯದಲ್ಲೂ ಅನುಸರಿಸಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನೂ ತ್ಯಜಿಸುತ್ತೇವೆ ಎಂದು ಕೈದಿಗಳು ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.