NEWS: ಕಲೆ- ಸಂಸ್ಕೃತಿ- ಯಕ್ಷಗಾನ ಉಳಿಸಿ ಬೆಳೆಸುವಲ್ಲಿ ಸಿರಿಬಾಗಿಲು ಪ್ರತಿಷ್ಠಾನದಂಥ ಸರಕಾರೇತರ ಸಂಸ್ಥೆಗಳ ಕೊಡುಗೆಗಳು ಅಪಾರ- ಡಾ. ಬಿಳಿಮಲೆ
ಡಾ. ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿದರು. |
ಕನ್ನಡ- ಸಾಹಿತ್ಯ- ಸಂಸ್ಕೃತಿ- ಕಲೆ- ಯಕ್ಷಗಾನ ಇತ್ಯಾದಿಗಳ ಉಳಿವಿಗಾಗಿ ಸರಕಾರೇತರ ಸಂಸ್ಥೆಗಳ ಕೊಡುಗೆಗಳು ಅಪಾರವಾಗಿದೆ ಎಂದು ಕರ್ನಾಟಕ ಸರಕಾರದ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ. ಪುರುಷೋತ್ತಮ್ ಬಿಳಿ ಮಲೆಯವರು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ನಡೆದ ಸಂಸ್ಕೃತಿ ಶಿಬಿರ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು..ಗಡಿನಾಡು ಕಾಸರಗೋಡಿನಲ್ಲಿ ಯಕ್ಷಗಾನ ಹಾಗೂ ಸಾಹಿತ್ಯಕ್ಕಾಗಿ ಸಿರಿಬಾಗಿಲು ಪ್ರತಿಷ್ಠಾನವು ನೀಡುತ್ತಿರುವ ಕೊಡುಗೆಗಳು ಗಣನೀಯವಾದದು.ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತ ರಾಮಕೃಷ್ಣ ಮಯ್ಯ ಅವರ ಸಾಧನೆ ಮೆಚ್ಚುವಂತಹ ದ್ದು. ಅವರ ಯೋಜನೆ ಗೆ ಸಹಕರಿಸಬೇಕಾದ ನಮ್ಮೆಲ್ಲರ ಕರ್ತವ್ಯ. ಆದುದರಿಂದ ಮುಂದಿನ ದಿನಗಳಲ್ಲಿ ಪ್ರತಿಷ್ಠಾನಕ್ಕೆ ಯಾವುದಾದರೂ ಕಂಪನಿಗಳ ಸಿ.ಎಸ್.ಆರ್.ಫಂಡ್ ಒದಗಿಸಿ ಪ್ರತಿಷ್ಠಾನದ ಚಟುವಟಿಕೆಯನ್ನು ಇನ್ನು ಹೆಚ್ಚು ನಡೆಯುವಂತಾಗಲು, ಪ್ರತಿಷ್ಠಾನದ ಎಲ್ಲಾ ಯೋಜನೆಗಳು ಕಾರ್ಯಗವಾಗುವಂತಾಗಲು ಸಹಕರಿಸುವುದಾಗಿ ಹೇಳಿದರು. ಮುಂದಿನ ಪೀಳಿಗೆಗೆ ಈ ಯೋಜನೆಗಳು ಹಸ್ತಾಂತರವಾಗಿ ಕಲೆ ಸಂಸ್ಕೃತಿ ಯಕ್ಷಗಾನ ಉಳಿದು ಬೆಳೆಯಬೇಕು. ಎಲ್ಲರೂ ಸಿರಿ ಬಾಗಿಲು ಪ್ರತಿಷ್ಠಾನಕ್ಕೆ ಸಹಕರಿಸೋಣ, ಜೊತೆಯಾಗೋಣ ಎಂದು ಶುಭ ಹಾರೈಸಿದರು. ಅತಿಥಿಗಳಾಗಿ ಡಾ. ಸುಂದರ ಕೇಣಾಜೆ, ಜಾನಪದ ಸಂಶೋಧಕರು, ಗಮಕ ಪರಿಷತ್ತಿನ ಅಧ್ಯಕ್ಷರಾಗಿರುವಂತಹ ಶ್ರೀ ತೆಕ್ಕೆಕ್ಕೆರೆ ಶಂಕರ್ ನಾರಾಯಣ ಭಟ್ ಮುಂತಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಲು ರಾಮಕೃಷ್ಣ ಮಯ್ಯ ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.