-->
Mangalore News: ಕಾಸರಗೋಡು - ಮಂಗಳೂರು ಮಧ್ಯೆ ಶೀಘ್ರ ಇನ್ನೂ 4 ರಾಜಹಂಸ  ಬಸ್ ಸೇವೆ ಆರಂಭ

Mangalore News: ಕಾಸರಗೋಡು - ಮಂಗಳೂರು ಮಧ್ಯೆ ಶೀಘ್ರ ಇನ್ನೂ 4 ರಾಜಹಂಸ ಬಸ್ ಸೇವೆ ಆರಂಭ

 

ಕಾಸರಗೋಡು - ಮಂಗಳೂರು ನಡುವಿನ ಹೆದ್ದಾರಿ ಕೆಲಸ ಮುಗಿದೊಡನೆಯೇ ಕಾಸರಗೋಡು- ಮಂಗಳೂರು ನಡುವೆ ಮಿತ ನಿಲುಗಡೆಯ ಬಸ್ ಸೇವೆಯನ್ನು ಕೆ ಎಸ್ ಆರ್ ಟಿ ಸಿಯು ಆರಂಭಿಸಲಿದೆ ಎಂದು ವರ್ಷದ ಹಿಂದೆ ಭರವಸೆಕೊಟ್ಟು, ಕೊಟ್ಟ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಉಭಯ ನಗರಗಳ ನಡುವೆ ರಾಜಹಂಸ ಬಸ್ ಗಳ ಸೇವೆಯನ್ನು ಆರಂಭಿಸಿದ 
 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ( KSRTC) ಯ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಶ್ರೀ ರಾಜೇಶ್ ಶೆಟ್ಟಿಯವರನ್ನು   ಕಾಸರಗೋಡು ಮಂಗಳೂರು ಪ್ರಯಾಣಿಕರ ಸಂಘಟನೆಯಾದ ಸಹಯಾತ್ರಿ ತಂಡದವು  ಶಾಲು ಹೊದೆಸಿ ,ಸ್ಮರಣಿಕೆ ನೀಡಿ ಅಭಿನಂದಿಸಿತು.

ಈ ಸಂದರ್ಭದಲ್ಲಿ ಸಹಯಾತ್ರಿ ತಂಡದವರ ಜೊತೆ ಮಾತನಾಡಿದ ರಾಜೇಶ್ ಶೆಟ್ಟಿಯವರು "ಮಂಗಳೂರು  ಕಾಸರಗೋಡು ಮಧ್ಯೆ ಈಗಾಗಲೇ  2 ಬಸ್ ಸೇವೆ ಆರಂಭವಾಗಿದ್ದು ಕೂಡಲೇ ಇನ್ನು 2 ಬಸ್  ಆರಂಭಿಸುವುದಾಗಿ ತಿಳಿಸಿದರು ಹಾಗೂ  ಶೀಘ್ರದಲ್ಲಿ ಮತ್ತೆರಡು ಬಸ್ ಗಳು ಕೂಡ ಆರಂಭವಾಗಲಿದ್ದು ಒಟ್ಟು  6 ರಾಜಹಂಸ ಬಸ್ ಗಳು ಓಡಾಡಲಿವೆ" ಎಂಬುದಾಗಿ ತಿಳಿಸಿದರು.  ಕಾಸರಗೋಡು ಮಂಗಳೂರು ನಡುವೆ ಈಗಾಗಲೇ ಓಡಾಡುವ ರಾಜಹಂಸ ಬಸ್ ಗೆ ಪ್ರಯಾಣಿಕ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.  ಈಗಾಗಲೇ ಸೇವೆ ಆರಂಭಿಸಿರುವ  ಬಸ್  ನ ದರ ಹಾಗೂ  ಬಸ್ ನಿಲುಗಡೆ ಕುರಿತು  ಸಹಯಾತ್ರಿ ತಂಡದ ಸಲಹೆ ಸೂಚನೆಗಳನ್ನು ಅವರು ಆಲಿಸಿದರು.  ಬಸ್ ಸೇವೆಯ ಗುಣಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಿರಂತರ ಸಲಹೆ ಸೂಚನೆಗಳನ್ನು ನೀಡುತ್ತಿರುವ ಸಹಯಾತ್ರಿಯ ಕೆಲಸವನ್ನು ಶ್ಲಾಘಿಸಿದ ಅವರು ಮುಂದೆಯೂ  ಸಹಯಾತ್ರಿ ತಂಡದವರು ಸಲಹೆ ಸೂಚನೆಗಳನ್ನು ಮುಂದುವರಿಸಬೇಕೆಂದು  ವಿನಂತಿಸಿದರು.

 ಸಹಯಾತ್ರಿ ತಂಡವನ್ನು  ಕಿಶೋರ್ ಏನಂಕೂಡ್ಲು, ಲೋಕೇಶ್ ಜೋಡುಕಲ್ಲು ಹಾಗೂ ಶಿವಕೃಷ್ಣ ನಿಡುವಜೆ  ಪ್ರತಿನಿಧಿಸಿದ್ದರು


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ