-->
Siddakatte: ದೇಶಿಯ ಉತ್ಪನ್ನ ಬಳಕೆಗೆ ಸಹಕಾರಿ ಸಂಘಗಳು ಉತ್ತೇಜನ ನೀಡಿದರೆ ದೇಶದ ಜಿಡಿಪಿ ಏರಿಕೆ: ಪ್ರಭಾಕರ ಪ್ರಭು

Siddakatte: ದೇಶಿಯ ಉತ್ಪನ್ನ ಬಳಕೆಗೆ ಸಹಕಾರಿ ಸಂಘಗಳು ಉತ್ತೇಜನ ನೀಡಿದರೆ ದೇಶದ ಜಿಡಿಪಿ ಏರಿಕೆ: ಪ್ರಭಾಕರ ಪ್ರಭು

 

ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನ ಅಡಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ಸಹಕಾರಿಗಳು ಮತ್ತು ಗ್ರಾಹಕರಿಗೆ ದೇಶಿಯ ಉತ್ಪನ್ನಗಳ ಉತ್ಪಾದನೆ ಮತ್ತು ಬಳಕೆ ಮಾಡಲು ಹಾಗೂ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ರಸಾಯನಿಕ ಗೊಬ್ಬರ ಬದಲಾಗಿ ಸಾವಯವ ಗೊಬ್ಬರಗಳ ಬಳಕೆಗೆ ಉತ್ತೇಜನ ನೀಡಿದಾಗ  ಭಾರತದ ಜಿಡಿಪಿ ಇನ್ನಷ್ಟು ಏರಿಕೆಯಾಗಿ ಪ್ರಾಥಮಿಕ ಸಹಕಾರ ಸಂಘಗಳು ಬಲವರ್ಧನೆ ಯಾಗುವುದರೊಂದಿಗೆ  ಭಾರತ ಜಗತ್ತಿನಲ್ಲಿಯೇ ಅಗ್ರರಾಷ್ಟವಾಗಿ ಹೊರ ಹೊಮ್ಮಲ್ಲಿದ್ದು ಸಹಕಾರ ಸಂಘಗಳು ದೇಶಿಯ ಉತ್ಪನ್ನಗಳ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಸಹಕರಿಸ ಬೇಕು  ಎಂದೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

 ಅವರು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೃಷ್ಣ ರೈ ರೈತ ಸಭಾಂಗಣದಲ್ಲಿ  ಜರಗಿದ ಸಂಘದ 2024-25 ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಸಂಘವು ಗತ ವರ್ಷದಲ್ಲಿ ವಿವಿಧ ರೀತಿಯಲ್ಲಿ 122 ಕೋಟಿ ಸಾಲ ವಿತರಸಿ,   545 ಕೋಟಿ ವ್ಯವಹಾರದೊಂದಿಗೆ 1.93 ಕೋಟಿ ಲಾಭಗಳಿಸಿ  ಸಂಘದ ಸದಸ್ಯರಿಗೆ ಶೇ 11 ರಷ್ಟು ಲಾಭಾಂಶ ನೀಡಲಾಗುವುದೆಂದರು.

 ಸಂಘದಲ್ಲಿ 3611 ‘ಎ’ ತರಗತಿ ಸದಸ್ಯರು , 1921 ‘ಡಿ ‘ ತರಗತಿ ಸದಸ್ಯರು ಸೇರಿದಂತೆ ಒಟ್ಟು 5532 ಸದಸ್ಯರನ್ನು ಹೊಂದಿದ್ದು,ವರದಿ ವರ್ಷದಲ್ಲಿ 2153 ಮಂದಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 47.40 ಕೋಟಿ ಸಾಲವನ್ನು ಮಂಗಳಾ ಕಿಸಾನ್ ಕಾರ್ಡ್ ಮೂಲಕ ವಿತರಿಸಲಾಗಿದ್ದು, ಶೇ 3 ಬಡ್ಡಿದರದಲ್ಲಿ ಕೃಷಿ ಅಭಿವೃದ್ದಿಗಾಗಿ 266 ಮಂದಿ ರೈತರಿಗೆ 8.28 ಕೋಟಿ ಸಾಲ ನೀಡಲಾಗಿದೆ . ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಸುಗಳ ನಿರ್ವಹಣೆಗಾಗಿ ಶೂನ್ಯ ಬಡ್ಡಿದರದಲ್ಲಿ 3.91 ಕೋಟಿ ನೀಡಲಾಗಿದೆ. ಜಮೀನು ಅಡಮಾನ ಸಾಲ ಮತ್ತು ವೈಯಕ್ತಿಕ ಸಾಲ ಸೇರಿದಂತೆ ಒಟ್ಟು 19.08 ಕೋಟಿ ಸಾಲ ವಿತರಿಸಲಾಗಿದೆ. ಒಟ್ಟಿನಲ್ಲಿ 2419 ಸದಸ್ಯರಿಗೆ 123.33 ಕೋಟಿ ಸಾಲವನ್ನು ನೀಡಲಾಗಿದೆ ಎಂದರು.

 ಸಂಘವು ನಿರಂತರವಾಗಿ ಪ್ರಗತಿ ಸಾಧಿಸಿದ್ದಕ್ಕಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೆಚ್ಚುಗೆ ವ್ಯಕ್ತ ಪಡಿಸಿದೆ . ಸತತವಾಗಿ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿದೆ. 2024-25 ನೇ ಸಾಲಿನಲ್ಲಿ ಯಶಸ್ವಿನಿ ಆರೋಗ್ಯ ರಕ್ಷಣೆ ಯೋಜನೆಯನ್ವಯ 449 ಕುಟುಂಬಗಳ 1486 ಸದಸ್ಯರು ನೋಂದಣಿ ಮಾಡಿಸಲಾಗಿದ್ದು,ಒಟ್ಟು 2.70 ಲಕ್ಷ ಪ್ರೀಮಿಯಂ ಮೊತ್ತವನ್ನು ಸರಕಾರಕ್ಕೆ ಪಾವತಿಸಲಾಗಿದೆ.ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ‘ಎ’ ಗ್ರೇಡ್ ಬಂದಿದ್ದು,ಶೇ 98 ಸಾಲ ವಸೂಲಾತಿ ಪ್ರಗತಿ ಸಾಧಿಸಲಾಗಿದ್ದು , ಪ್ರಸಕ್ತ ಸಾಲಿನಲ್ಲಿ ಶೆ 100 ಸಾಲ ವಸೂಲಾತಿ ಸಾಧಿಸುವಲ್ಲಿ ಸದಸ್ಯರು ಸಹಕಾರ ನೀಡಬೇಕೆಂದರು.

 ನುಡಿನಮನ ಮತ್ತು ಶ್ರದ್ದಾಂಜಲಿ

 ಇತ್ತೀಚಿಗೆ  ನಿಧನರಾದ ಸಂಘದ ನಿವೃತ್ತ ಸಿಬ್ಬಂದಿ ಜನಾರ್ಧನ ಶೆಟ್ಟಿಗಾರ್ ರವರಿಗೆ ಶ್ರದ್ದಾಂಜಲಿ ಹಾಗೂಸಂಘದಲ್ಲಿ ಸದಸ್ಯರಾಗಿದ್ದು,ಮರಣ ಹೊಂದಿದ 36 ಸದಸ್ಯರಿಗೆ ಮಹಾಸಭೆಯಲ್ಲಿ ನುಡಿನಮನ ಸಲ್ಲಿಸಲಾಯಿತು ಸಂಘದ ವ್ಯಾಪ್ತಿಯ ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಒತ್ತು ನೀಡುವ ಉದ್ದೇಶದಿಂದ ಸ್ವಾವಲಂಬನೆ ಬದುಕು ನಿರ್ವಹಿಸಲು ಪ್ರೋತ್ಸಾಹ ನೀಡುವ ಹಿನ್ನಲೆಯಲ್ಲಿಸುಮಾರು 60 ಮಂದಿ ಮಹಿಳೆಯರಿಗೆ ಉಚಿತ ಮಂಗಳೂರು ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಸಹಯೋಗದಲ್ಲಿ  “ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ “ತರಬೇತಿಯನ್ನು ರೋಟರಿ ಕ್ಲಬ್ಗಳ ಸಹಯೋಗದಲ್ಲಿ ಸಂಘದ ಸಭಾಂಗಣದಲ್ಲಿ ಸಂಘದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ.

ಸಾಲ ಮಿತಿ ಹೆಚ್ಚಳ ಬಗ್ಗೆ ಸರಕಾರದ ಸುತ್ತೋಲೆ ಅನುಷ್ಠಾನಕ್ಕೆ ಒತ್ತಾಯ

0% ಸಾಲ 3 ಲಕ್ಷದಿಂದ-5 ಲಕ್ಷ ಶೇ 3 ರ ಬಡ್ಡಿ ದರದ 10 ಲಕ್ಷ ದಿಂದ 15 ಲಕ್ಷ ವರೆಗಿನ ಸಾಲ ಮಿತಿಯ ಬಗ್ಗೆ ಸರಕಾರದ ಸುತ್ತೋಲೆ ಅನುಷ್ಠಾನಕ್ಕೆ  ಮತ್ತು ಬಾಕಿ ಸಾಲ ಮನ್ನಾ ಹಣ ಬಿಡುಗಡೆಗೆ ಸದಸ್ಯರು ಬೇಡಿಕೆ ಸಲ್ಲಿಸಿದರು.

 ಸಾಧಕರಿಗೆ ಸನ್ಮಾನ, ಅಭಿನಂದನೆ

ಸಿದ್ದಕಟ್ಟೆ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜ್ ನಲ್ಲಿ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ ಪದ್ದೋನ್ನತಿ ಗೊಂಡಿರುವ ಶ್ರೀನಿವಾಸ ನಾಯ್ಕ ಮತ್ತು ಪಶು ಪಾಲನೆ ಇಲಾಖೆಯಲ್ಲಿ  ಸೇವೆ ಸಲ್ಲಿಸಿ ನಿವೃತ್ತಿ ಗೊಂಡಿರುವ ಕಾಂತಪ್ಪ ನಾಯ್ಕ ಹಾಗೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಯಾಗಿರುವ ಯಶೋಧರ ಶೆಟ್ಟಿಗಾರ್ ರವರನ್ನು ಗೌರವಿಸಿ ಅಭಿನಂದಿಸಿದರು.ಪ್ರಧಾನ ಕಚೇರಿ ಸೇರಿದಂತೆ ರಾಯಿ ,ಆರಂಬೋಡಿ,ಮಾವಿನ ಕಟ್ಟೆ ,ಅರಳ ಶಾಖೆಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು,ಸದಸ್ಯರ ಪ್ರತಿಕ್ರಿಯೆ ಧನಾತ್ಮಕವಾಗಿ ಲಾಭದತ್ತ ಸಾಗುತ್ತಿದೆ.ವೇದಿಕೆಯಲ್ಲಿ ನಿರ್ದೇಶಕರಾದ ಸತೀಶ್ ಪೂಜಾರಿ,,ದಿನೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ , ವೀರಪ್ಪ ಪರವ, ಜಾರಪ್ಪ ನಾಯ್ಕ,  ಮಂದರಾತಿ ಎಸ್ ಶೆಟ್ಟಿ, ಪುಷ್ಪಲತಾ ಎಸ್ ಆರ್,ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ, ನವೀನ್ ಹೆಗ್ಡೆ ಉಪಸ್ಥಿತರಿದ್ದರು. ಮಹಾಸಭೆಯಲ್ಲಿ ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ರತ್ನಕುಮಾರ್ ಚೌಟ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಕುಮಾರ್ ಸಂಗಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ ಕುಲಾಲ್, ಪ್ರಮುಖರಾದ,ಸಂದೀಪ್ ಶೆಟ್ಟಿ ಪೊಡುಂಬ, ಕಿರಣ್ ಕುಮಾರ್ ಮಂಜಿಲ, ಡಾ! ಶ್ರೀಧರ್ ಶೆಟ್ಟಿ, ಲಕ್ಷ್ಮೀಧರ ಶೆಟ್ಟಿ, ಜಗದೀಶ್ ಆಳ್ವ, ರಂಜನ್ ಕುಮಾರ್ ಶೆಟ್ಟಿ, ಲಿಂಗಪ್ಪ ಪೂಜಾರಿ,ನಾರಯಣ ನಾಯಕ್,ಕೆ, ಸದಾಶಿವ ಕರ್ಪೆ,ಹರೀಶ್ ಆಚಾರ್ಯ, ಉಮೇಶ್ ಗೌಡ,ಅರುಣಾ ಶೆಟ್ಟಿ, ವಸಂತ ಕುಮಾರ್ ಅಣ್ಣಾಳಿಕೆ, ವಸಂತ ಗೌಡ, ಮಾದವ ಶೆಟ್ಟಿಗಾರ್,ಚಂದ್ರಶೇಖರ ಗೌಡ,ಗೋಪಾಲ ರೈ, ಜಯರಾಮ ಅಡಪ ,ವಸಂತ ಕುಮಾರ್ ಜೈನ್, ಮೈಕಲ್ ಡಿ ಕೊಸ್ತ, ,ರಾಜೇಶ್ ಶೆಟ್ಟಿ ಸೀತಾಳ, ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ವಾರ್ಷಿಕ ವರದಿ ಪ್ರಸ್ತಾಪಿಸಿ,ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ  ಸ್ವಾಗತಿಸಿ, ಸಹಾಯಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾ  ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಶ್ಮಿತ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ