-->
CRIME NEWS: ಅಬಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದ ಇಬ್ಬರು ಗಾಂಜಾ ಪೆಡ್ಲರ್ ಗಳ ಬಂಧನ

CRIME NEWS: ಅಬಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದ ಇಬ್ಬರು ಗಾಂಜಾ ಪೆಡ್ಲರ್ ಗಳ ಬಂಧನ

 


ಬಂಟ್ವಾಳ: ಗಾಂಜಾ ಸಾಗಾಟ ಪ್ರಕರಣದಲ್ಲಿ ಅಬ್ದುಲ್ ಸಾದಿಕ್ ಮತ್ತು ಅಬ್ದುಲ್ ಮಜೀದ್ ಎಂಬಿಬ್ಬರನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಇಬ್ಬರ ವಿರುದ್ಧವೂ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಗೂಡಿನಬಳಿಯಲ್ಲಿ ರೌಂಡ್ಸ್ ನಲ್ಲಿರುವ ಸಮಯ, ಪಾಣೆಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಒಂದು ಮೋಟಾರು ಸೈಕಲಿನಲ್ಲಿ ಇಬ್ಬರು ಹೆಲ್ಮೆಟ್‌ ಧರಿಸದೆ ಬರುತ್ತಿದ್ದು  ಎಸ್.ಐ. ನಿಲ್ಲಿಸುವಂತೆ ಸೂಚನೆ ನೀಡಿದಾಗ, ಮುಂದೆ ಹೋಗಿದ್ದು, ಬಳಿಕ ಅವರನ್ನು ಸುತ್ತುವರಿದು ವಿಚಾರಿಸಿದಾಗ, ಇಬ್ಬರೂ ಸೆ.25ರಂದು ಬೊಲೋರೋ ಪಿಕಪ್ ವಾಹನದಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಇಲಾಖೆಯವರು ಬೆನ್ನಟ್ಟಿದ ವೇಳೆ ವಾಹನ ನಿಲ್ಲಿಸಿ ಪರಾರಿಯಾದವರು ಎಂದು ತಿಳಿದುಬಂದಿದೆ. ಫರಂಗಿಪೇಟೆಯ ಚೋಟಾ ಅಶ್ರಪ್ ಮತ್ತು ಅಜರುದ್ದೀನ್ ಇವರು ಮಾರಾಟ ಮಾಡಿದ್ದು ಹೆಚ್ಚಿನದನ್ನು ಮಂಗಳೂರು ಕಡೆಗೆ  ಬೇರೆ ಗಿರಾಕಿಗಳಿಗೆ  ಮಾರಾಟ ಮಾಡಲು ಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳಿಂದ 5  ಕಟ್ಟು ಪ್ಲಾಸ್ಟಿಕ್ ಸಹಿತ ಸುಮಾರು 88,700 ರೂ ಗಾಂಜಾ,ಮತ್ತು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು  ಮೌಲ್ಯ 2.17 ಲಕ್ಷ ರೂ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ