ACCIDENT: ಕಲ್ಲಡ್ಕ ಸಮೀಪ ಅಪಘಾತ: ಸ್ಕೂಟರಿಗೆ ಕಾರು ಡಿಕ್ಕಿ
Friday, April 22, 2022
ಬಂಟ್ವಾಳ: ಕಲ್ಲಡ್ಕ ಸಮೀಪ ಗಣೇಶಕೋಡಿ ಎಂಬಲ್ಲಿ ಸ್ಕೂಟರಿಗೆ ಕಾರು ಡಿಕ್ಕಿಯಾದ ಪರಿಣಾಮ, ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಡ್ಯನಡ್ಕ ನಿವಾಸಿ ವಿಜಯ್ ಕೆ. ಗಾಯಗೊಂಡವರು. ಕರ್ತವ್ಯಕ್ಕೆಂದು ಸ್ಕೂಟರಿನಲ್ಲಿ ತೆರಳುತ್ತಿದ್ದ ಸಂದರ್ಭ ಗೋಳ್ತಮಜಲು ಗ್ರಾಮದ ಗಣೇಶ ಕೋಡಿ ಎಂಬಲ್ಲಿಗೆ ತಲುಪಿದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಮೇತ ಎಸೆಯಲ್ಪಟ್ಟು ಬಿದ್ದಿದ್ದಾರೆ. ಮಂಗಳೂರು ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಪ್ರಕರಣ ದಾಖಲಾಗಿದೆ.