RAIN DAMAGE: ಭಾರಿ ಗಾಳಿ, ಮಳೆ - ವಿಟ್ಲ ಪರಿಸರದಲ್ಲಿ ಹಾನಿ
Friday, April 22, 2022
ವಿಟ್ಲ ಪರಿಸರದಲ್ಲಿ ಶುಕ್ರವಾರ ಸಂಜೆ ವೇಳೆ ಬಂದ ಭಾರೀ ಮಳೆಗಾಳಿಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ. ವಿಟ್ಲ ಬೊಬ್ಬೆಕೇರಿ ಮೀನು ಮಾರುಕಟ್ಟೆ ಸಮೀಪದ ಬೀಪಾತುಮ್ಮ ಅವರ ಮನೆಯ ಸೀಟಿನ ಛಾವಣಿ ಗಾಳಿ ಹಾರಿ ಹೋಗಿ ಸಂಪೂರ್ಣ ಹಾನಿಯಾಗಿದೆ.ಮನೆಮಂದಿಯನ್ನು ಸಮೀಪದ ಮನೆಗೆ ಸ್ಥಳಾಂತರ ಮಾಡಲಾಗಿದೆ.
ವಿಟ್ಲ ಸಾಲೆತ್ತೂರು ರಸ್ತೆಯ ನಿವಾಸಿ ಪಾಡುರಂಗ ಆಚಾರ್ಯ ಅವರ ಮನೆಗೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ. ಅದೇ ರೀತಿ ವಿಟ್ಲ ಸುತ್ತಮುತ್ತಲಿನಲ್ಲಿ ಅಪಾರ ಹಾನಿ ಸಂಭವಿಸಿದೆ. ಹೆಚ್ಚಿನ ಹಾನಿಯ ಬಗ್ಗೆ ನಿರೀಕ್ಷಿಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ಕಂದಾಯ ಇಲಾಖೆ ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಆಗಮಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.