
CRIME - ಏಣಿ ಮೂಲಕ ಇಳಿದು ವಯರ್ ಕದ್ದೊಯ್ದರು!! : ಮೂರು ತಿಂಗಳ ಬಳಿಕ ಬಯಲಾಯ್ತು ಪ್ರಕರಣ
Friday, April 22, 2022
ಬಂಟ್ವಾಳದ ಅಜೆಕಲ ಎಂಬಲ್ಲಿರುವ ಎಲೆಕ್ಟ್ರಿಕಲ್ ಕಚೇರಿಯಲ್ಲಿ ದಾಸ್ತಾನಿಟ್ಟಿದ್ದ ಎಲೆಕ್ಟ್ರಿಕಲ್ ಸಾಮಾಗ್ರಿಗಳನ್ನು ಕಳೆದ ಜನವರಿಯಲ್ಲಿ ಏಣಿ ಮೂಲಕ ಅಂಗಡಿಯೊಳಗಿಳಿದು ಸಾಮಾಗ್ರಿಗಳನ್ನು ಕದ್ದೊಯ್ದ ಘಟನೆ ನಡೆದ ವಿಚಾರ ಸಿಸಿ ಟಿವಿ ಪರಿಶೀಲಿಸಿದಾಗ ಕಂಡುಬಂದಿದ್ದು, ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ನಡೆದ ಕುರಿತು ನೀಡಿದ ದೂರಿನಂತೆ ಬೈಪಾಸ್ ರಸ್ತೆ ಅಜೆಕಲ್ ದಲ್ಲಿ ಇರುವ ಕಚೇರಿಯಲ್ಲಿ ಬೆಲೆ ಬಾಳುವ ಎಲೆಕ್ಟ್ರೀಕಲ್ ಸಾಮಾಗ್ರಿಗಳನ್ನು ದಾಸ್ತಾನ ಇಟ್ಟಿರುವುದಾಗಿದ್ದು, ಪರಿಶೀಲನೆ ನಡೆಸುವ ಸಂದರ್ಭ ಸುಮಾರು 10,40,000 ರೂಗಳ ಅಂದಾಜು 8 ಟನ್ ಹಳೆಯ ಅಲ್ಯೂಮಿನಿಯಂ ವಾಹಕ ವೈರಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.
ಸಂಶಯಗೊಂಡ ಮಾಲೀಕರು ಜಾಗದ ಸಿಸಿಟಿವಿ ಕ್ಯಾಮೇರ ಪರಿಶೀಲಿಸಿದಾಗ ಜನವರಿಯಲ್ಲಿ ಏಣಿ ಮೂಲಕ ಒಳಪ್ರವೇಶಿಸಿ 3 ಜನ ಸೇರಿಕೊಂಡು ರಿಕ್ಷಾ ಹಾಗೂ ಪಿಕ್ಅಪ್ ವಾಹನದಲ್ಲಿ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ.ಈ ಕುರಿತು ಬಂಟ್ವಾಳ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.