-->
ACCIDENT: ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು, ನಾಲ್ವರು ಪ್ರಾಣಪಾಯದಿಂದ ಪಾರು

ACCIDENT: ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು, ನಾಲ್ವರು ಪ್ರಾಣಪಾಯದಿಂದ ಪಾರು

 ಚಾಲಕನ ನಿಯಂತ್ರಣ ತಪ್ಪಿಬಾವಿಗೆ ಬಿದ್ದ ಕಾರು... ಘಟನೆಯಲ್ಲಿ ನಾಲ್ವರು ಪ್ರಾಣಪಾಯದಿಂದ ಪಾರಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.


ಕಾಸರಗೋಡು : ನಿಯಂತ್ರಣ ತಪ್ಪಿದ ಕಾರು ಬಾವಿಗೆ ಬಿದ್ದ ಘಟನೆ ಬೇಕಲ ಸಮೀಪದ ಪೂಚಕ್ಕಾಡ್  ಬಳಿ ಇಂದು ಸಂಜೆ ನಡೆದಿದ್ದು , ಕಾರಲ್ಲಿದ್ದ ನಾಲ್ವರು  ಪವಾಡ ಸದೃಶ ವಾಗಿ ಪಾರಾಗಿದ್ದಾರೆ . 


 

ಸಂಜೆ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬಾವಿಯಲ್ಲಿ ಸಿಲುಕಿದ್ದ  ನಾಲ್ವರನ್ನು ಪರಿಸರವಾಸಿಗಳು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳು ಮೇಲಕ್ಕೆತ್ತಿ ರಕ್ಷಿಸಿದರು.

ಅತೀ ವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ  ರಸ್ತೆ ಬದಿಯ ಆವರಣ ಇಲ್ಲದ ಬಾವಿಗೆ ಬಿದ್ದಿದ್ದು , ಇದನ್ನು ಗಮನಿಸಿದ ಪರಿಸರವಾಸಿಗಳು  ಕೂಡಲೇ ಕಾರ್ಯಾಚರಣೆ ನಡೆಸಿದ್ದು , ಮೂವರನ್ನು ಪರಿಸರದ ಯುವಕರು   ಕಾರಿನಿಂದ ಹೊರತೆಗೆದು ಮೇಲಕ್ಕೆತ್ತಿದರು.  ಓರ್ವನನ್ನು ಅಗ್ನಿಶಾಮಕ ದಳದ ಸಿಬಂದಿ ರಕ್ಷಿಸಿದರು 

ಬಾವಿಗೆ ಬಿದ್ದ ಕಾರು ಅರ್ಧ ಮುಳುಗಿದ ಸ್ಥಿತಿಯಲ್ಲಿತ್ತು . ಕಾರಿನ ಗಾಜು ಹಾಗೂ ಬಾಗಿಲು ಒಡೆದು ನಾಲ್ವರನ್ನು ಹೊರೆತೆಗೆದು ಮೇಲಕ್ಕೆ ತಂದು ರಕ್ಷಿಸಲಾಯಿತು  ಕಾರಲ್ಲಿದ್ದವರು  ಉದುಮ ನಿವಾಸಿ ಗಳಾಗಿದ್ದಾರೆ . ಕಾರನ್ನು ಕ್ರೇನ್ ಬಳಸಿ ಹೊರತೆಗೆಯಲಾಯಿತು

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ