-->
Dakshina Kannada News: ಕಾಣಿಯೂರು ರೈಲ್ವೆ ನಿಲ್ದಾಣದ ಪರಿಸ್ಥಿತಿ ಹೀಗಿದೆ…!!!

Dakshina Kannada News: ಕಾಣಿಯೂರು ರೈಲ್ವೆ ನಿಲ್ದಾಣದ ಪರಿಸ್ಥಿತಿ ಹೀಗಿದೆ…!!!

 

ದಕ್ಷಿಣ ಕನ್ನಡ ಜಿಲ್ಲೆಯ ಕಾಣಿಯೂರು ರೈಲ್ವೆ ನಿಲ್ದಾಣದ ಸ್ಥಿತಿಯನ್ನು ಎಕ್ಸ್ ನಲ್ಲಿ ವಿವರಿಸಲಾಗಿದೆ.

‘’ ರಾಜ್ಯ ಹೆದ್ದಾರಿಗೆ ಅತ್ಯಂತ ಹತ್ತಿರದಲ್ಲಿರುವ ಹಾಗು ನೈರುತ್ಯ ರೈಲ್ವೆ ವಲಯಕ್ಕೆ ಚಿನ್ನದ ಮೊಟ್ಟೆಯನ್ನೇ ಕೊಟ್ಟ ಕಾಣಿಯೂರು ರೈಲು ನಿಲ್ದಾಣದ ಪರಿಸ್ಥಿತಿ! ರೈಲು ನಿಲ್ದಾಣದ ಕಟ್ಟಡ ಪಾಳು ಬೀಳುವ ಸ್ಥಿತಿಯಲ್ಲಿದೆ. ನಿಲ್ದಾಣದ ಟಿಕೇಟು ಏಜೆಂಟ್ ತಮ್ಮ ಕೊಠಡಿಯ ಒಳಗೆ ಟಿಕೇಟು ಹಾಗು ಹಣವನ್ನು ಒದ್ದೆಯಾಗದಂತೆ ನೋಡಿಕೊಳ್ಳಲು ಕೊಡೆ ಹಿಡಿದುಕೊಂಡು ಕೂರಬೇಕಾಗಿದೆ. ಪ್ರಯಾಣಿಕರಿಗೆ ರೈಲಿಗೆ ಕಾಯಲು ಸರಿಯಾದ  ಶೆಡ್ ಇಲ್ಲ,ಆಸನದ ವ್ಯವಸ್ಥೆಯಿಲ್ಲ,ರಾತ್ರಿಯ ಹೊತ್ತು ದೀಪದ ವ್ಯವಸ್ಥೆಯಿಲ್ಲ,ಕರೆಂಟ್ ವ್ಯವಸ್ಥೆಯಿಲ್ಲ,ನೀರಿನ ವ್ಯವಸ್ಥೆಯಿಲ್ಲ!’’ – ಈ ಕುರಿತು ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಪುತ್ತೂರು ಸುಬ್ರಹ್ಮಣ್ಯ ರೈಲ್ವೆ ಬಳಕೆದಾರರು ಎಕ್ಸ್ ನಲ್ಲಿ ಒತ್ತಾಯಿಸಿದ್ದಾರೆ.


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ