CRIME: ಬಂಟ್ವಾಳ: ಲಕ್ಷಾಂತರ ರೂ ಮೌಲ್ಯದ ಸಾಮಗ್ರಿಗಳ ಕಳವುಗೈದ ನಾಲ್ವರು ಆರೋಪಿಗಳ ಬಂಧನ
ಬಂಟ್ವಾಳ:
ಇಲ್ಲಿನ ಬೈಪಾಸ್ ರಸ್ತೆಯಲ್ಲಿರುವ ಲೆವಿನ್ ಎಲೆಕ್ಟ್ರಿಕಲ್ಸ್ ಮತ್ತು
ಇಂಜಿನಿಯರಿಂಗ್ಸ್ ದಾಸ್ತಾನು ಕೊಠಡಿಯಂದ ಲಕ್ಷಾಂತರ ರೂ.ವಿನ ಎಲೆ ಸಾಮಾಗ್ರಿಗಳನ್ನು ಕಳವುಗೈದ ನಾಲ್ವರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ಆನಂದ್ ( 39 ),ಪಂಜಿಕಲ್ಲು ಗ್ರಾಮದ ಮುಕ್ಕುಡ ನಿವಾಸಿ ಯಶೋಧರ( 26), ಪಂಜಿಕಲ್ಲು ಗ್ರಾಮದ ನೀರಪಲ್ಕೆ ನಿವಾಸಿ ಆದೇಶ ಯಾನೆ ಚರಣ್ ( 25) ಅಮ್ಟಾಡಿ ಗ್ರಾಮದ ಕಲಾಯಿ ನಿವಾಸಿ ನಿಖಿಲ್( 26) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ಸುಮಾರು 10.40 ಲ.ರೂ.ಮೌಲ್ಯದ ಅಂದಾಜು 8 ಟನ್ ಹಳೆಯ ಎಸಿಎಸ್ ಆರ್ ಅಲ್ಯೂಮಿನಿಯಂ ವಾಹಕ ವಯರಗಳು ಮಾ. 20ರಂದು ಎಲೆಕ್ಟ್ರೀಕಲ್ ಸಾಮಾಗ್ರಿ ವಾರ್ಷಿಕ ಲೆಕ್ಕ ಪತ್ರ ಪರಿಶೀಲಿಸಿದಾಗ ಕಂಡು ಬಂದಿತ್ತು. ಈ ಬಗ್ಗೆ ಸಂಸ್ಥೆಯ ರಾಜೇಶ್ ರೋಡ್ರಿಗಸ್ ಅವರು ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ಕಾರ್ಯಾಚರಣೆಗೆ ಮುಂದಾದ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ಸಿಬ್ಬಂದಿ ಅಲ್ಲಿನ ಸಿಸಿ ಟಿವಿ ಪರಿಶೀಲಿಸಿದಾಗ ಆರೋಪಿಗಳು ದಾಸ್ತಾನು ಕೊಠಡಿಯಿಂದ ಹಳೆಯ ಎಸಿಎಸ್ ಆರ್ ಅಲ್ಯೂಮಿನಿಯಂ ವಾಹಕ ವಯರಗಳನ್ನು ಕಳವುಗೈದು ರಿಕ್ಷಾ ಹಾಗೂ ಪಿಕ್ಅಪ್ ವಾಹನದಲ್ಲಿ ಸಾಗಿಸುವ ದೃಶ್ಯ ಸೆರೆಯಾಗಿತ್ತು. ಇದನ್ನು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ನ್ಯಾಯಾಂಗ ಬಂಧನ ವಿಧಿಸಲಾಗಿದೆ.