CRIME: ಸಾಲದ ಬಾಧೆಯಿಂದ ಯುವಕ ಆತ್ಮಹತ್ಯೆ
Monday, May 9, 2022
ಬೆಳ್ತಂಗಡಿ: ಸಾಲದ ಬಾದೆಯಿಂದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ನಡೆದಿದೆ. ಮಾಲಾಡಿ ನಿವಾಸಿ ಅವಿವಾಹಿತ ಪ್ರಶಾಂತ್( 33) ಅವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ದಿನಸಿ ಅಂಗಡಿ ಯಲ್ಲಿ ಕೆಲಸ ಮಾಡುತ್ತಿದ್ದ ಈತ ಸಾಲ ಮಾಡಿದ್ದು ಈತ ಮಾಡಿದ್ದ ಸಾಲ ತೀರಿಸಲು ಸಾಧ್ಯವಾಗದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಲ್ಲಿ ಪ್ರಕರಣ ದಾಖಲಾಗಿದೆ.