-->
HEALTH: ಟೊಮೆಟೊ ಜ್ವರ: ಖಾಸಗಿ, ಸರ್ಕಾರಿ ಆಸ್ಪತ್ರೆಗಳಿಗೆ ಮಾಹಿತಿ ನೀಡಿದ್ದೀವಿ. :ಡಿಎಚ್ ಓ, ಡಾ ಕಿಶೋರ್ ಕುಮಾರ್

HEALTH: ಟೊಮೆಟೊ ಜ್ವರ: ಖಾಸಗಿ, ಸರ್ಕಾರಿ ಆಸ್ಪತ್ರೆಗಳಿಗೆ ಮಾಹಿತಿ ನೀಡಿದ್ದೀವಿ. :ಡಿಎಚ್ ಓ, ಡಾ ಕಿಶೋರ್ ಕುಮಾರ್

 

ಮಂಗಳೂರು: ಟೊಮೇಟೊ ಜ್ವರ ವೈರಸ್ ನಿಂದ ಹರಡುವಂತ ಜ್ವರ. ಸಾಮಾನ್ಯವಾಗಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕಂಡುಬರುತ್ತದೆ. ಕೆಂಪು ಗುಳ್ಳೆಗಳು ಕೂಡಾ ಕಾಣ್ತವೆ. ಹೀಗಾಗಿ ಪಕ್ಕದ ರಾಜ್ಯ ಕೇರಳದಲ್ಲಿ ಈ ಜ್ವರ ಕಾಣಿಸಿಕೊಂಡಿದ್ದರಿಂದ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ .ಕಿಶೋರ್ ಕುಮಾರ್ ಹೇಳಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ಈ ಕುರಿತು ಖಾಸಗಿ, ಸರ್ಕಾರಿ ಆಸ್ಪತ್ರೆಗಳಿಗೆ ಮಾಹಿತಿ ನೀಡಿದ್ದೀವಿ.‌ ಜ್ವರದ ಗುಣಲಕ್ಷಣಗಳನ್ನು ಹೊಂದಿರುವ ಮಕ್ಕಳ ಕುರಿತು ರಿಪೋರ್ಟ್ ಮಾಡುವಂತೆ ಸೂಚಿಸಿದ್ದೀವಿ ಅಂದ್ರು. ಅಲ್ಲದೇ ಇಂತಹ ಜ್ವರ ಕಂಡು ಬಂದ್ರೆ ಸರಿಯಾದ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಅಂದ್ರು. ಅಲ್ಲದೇ ಶಿಶು ತಜ್ಞರಿಗೂ ಕೂಡಾ ಮಾಹಿತಿ ನೀಡಿದ್ದೀವಿ ಎಂದರು.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ