NALIN KATEEL: ಸದ್ಯ ಬಿಜೆಪಿಗೆ ಆಪರೇಶನ್ ಕಮಲದ ಅಗತ್ಯವಿಲ್ಲ, ಸಿದ್ಧಾಂತ ಒಪ್ಪಿ ಬಂದವರಿಗೆ ಸ್ವಾಗತ – ರಾಜ್ಯಾಧ್ಯಕ್ಷ ನಳಿನ್
Thursday, May 12, 2022
ಮಂಗಳೂರು: ಬಿಜೆಪಿಗೆ ಸದ್ಯ ಅಪರೇಷನ್ ಕಮಲದ ಅಗತ್ಯವಿಲ್ಲ. ನಮ್ಮ ಸಿದ್ಧಾಂತ ಒಪ್ಪಿ ಬಂದವರಿಗೆ ಸ್ವಾಗತ ಎಂದು ಮಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಇಂದು ಸಂಜೆ ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ
ಮಾತನಾಡಿದ ಅವರು, ನಮಗೆ ಆಪರೇಷನ್ ಕಮಲ ಈಗ ಅಗತ್ಯವಿಲ್ಲ. ಯಾರೂ ಪಕ್ಷಕ್ಕೆ ಬರುತ್ತೇವೆ ಅವರನ್ನು
ತೆಗೆದುಕೊಳ್ಳುತ್ತೇವೆ. ಇನ್ನು ಮೊದಲ ಬಾರಿಗೆ ಪಿಎಸ್ಐ ಹಗರಣ ಆದಾಗ ತಕ್ಷಣ ಪಾರದರ್ಶಕವಾಗಿ ತನಿಖೆ
ನಡೆಸಿ ಆರೋಪಿತರನ್ನು ಬಂಧಿಸಲಾಗಿದೆ. ಬಿಜೆಪಿಗೆ ಬರುವವರನ್ನು ನಾವು ಸ್ವಾಗತಿಸುತ್ತೇವೆ. ಬಂದ ಬಳಿಕ
ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಮುಂದಿನ ದಿನಗಳಲ್ಲಿ ಆಗುತ್ತದೆ ಎಂದ ಅವರು ಕ್ಯಾಬಿನೆಟ್
ಬದಲಾವಣೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು,