MEET: ರಂಗಮಂದಿರದಲ್ಲಿ ಕಲಾಪ್ರಕಾರದ ಚಟುವಟಿಕೆಗಳಿಗೆ ಪ್ರಥಮ ಆದ್ಯತೆ: ಡಾ.ಭರತ್ ಶೆಟ್ಟಿ
Monday, May 16, 2022
ಮಂಗಳೂರು: ನಗರದ ಬೋಂದೆಲ್‌ನಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾ ರಂಗಮAದಿರದಲ್ಲಿ ಕಲಾ ಚಟುವಟಿಕೆಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದೆಂದು ಶಾಸಕರಾದ ಡಾ. ಭರತ್ ಶೆಟ್ಟಿ ಅವರು ತಿಳಿಸಿದರು.
ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮೇ.16ರ ಸೋಮವಾರ ಜಿಲ್ಲಾ ರಂಗಮAದಿರದ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಾತನಾಡಿ, ನಿರ್ಮಾಣವಾಗುತ್ತಿರುವ ರಂಗ ಮಂದಿರ 750 ಆಸನ ಸಾವ್ಮರ್ಥ್ಯವನ್ನು ಹೊಂದಿದೆ, ಅಲ್ಲಿ ಉತ್ತಮ ಧ್ವನಿ ಬೆಳಕಿನ ವ್ಯವಸ್ಥೆ, ಎ.ಸಿ., ಫ್ಯಾನ್, ಸ್ಭೆರಿದಂತೆ ಎಲ್ಲಾ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವ್ಯದು, ಮುಂದೆ ಹಂತ ಹಂತ ವಾಗಿ ಅನ್ಮದಾನ ಬಿಡುಗಡೆಯಾದಂತೆ ಇತರೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಮಳೆಗಾಲ ಆರಂಭವಾಗುವ ಮೊದಲು ಟೆಂಡರ್ ಪ್ರಕ್ರೀಯೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸ್ಮಾಟ್ ಸಿಟಿ ವಾಸ್ತುಶಿಲ್ಪಿ ಧರ್ಮ ರಾಜ್ ಅವರು ಉದ್ದೇಶಿತ ರಂಗಮಂದಿರ ನಿರ್ಮಾಣದ ವಿನ್ಯಾಸವನ್ನು ಸಭೆಯಲ್ಲಿ ಅನಾವರಣ ಮಾಡಿದರು.
ಕಲಾವಿದರಾದ ಯತೀಶ್ ಬೈಕಂಪಾಡಿ, ಯಕ್ಷಗಾನ ಕಲಾವಿದ ಅಶೋಕ್ ಸರಪಾಡಿ, ನಾಟಕಕಾರ ಜಗನ್ ಪವಾರ್, ಮೋಹನ್ ಕುಂಪಲಾ, ಸ್ಮಾಟ್ ಸಿಟಿ, ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯ ಎಚಿಜಿನಿಯರ್‌ಗಳು ಸಭೆಯಲ್ಲಿದ್ದರು.