SCHOOL: ಬಬ್ಬುಕಟ್ಚೆ ಪೆರ್ಮನ್ನೂರು ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವುದು ನನ್ನ ಗುರಿ : ಶಾಸಕ ಯು.ಟಿ.ಖಾದರ್
Monday, May 16, 2022
ಇಂದು ರಾಜ್ಯದಾದ್ಯಂತ ಶಾಲೆಗಳು ಬೇಸಿಗೆಯ ರಜೆ ಕಳೆದು ಪುನರಾರಂಭಗೊಂಡಿದ್ದು ವಿಧ್ಯಾರ್ಥಿಗಳು,ಹೆತ್ತವರು ಹಾಗೂ ಶಿಕ್ಷಕರರು ಸಂಭ್ರಮದಿಂದ ಶಾಲಾ ಪ್ರಾರಂಭೋತ್ಸವ ವನ್ನು ಆಚರಿಸಿದರು.ಮಂಗಳೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಶಾಲಾ ವಿದ್ಯಾರ್ಥಿಗಳ ಪರವಾಗಿ ಬಬ್ಬುಕಟ್ಟೆ ಪೆರ್ಮನ್ನೊರು ಶಾಲೆಯಲ್ಲಿ ಶಾಸಕ,ವಿಪಕ್ಷ ಉಪನಾಯಕ ಯು.ಟಿ.ಖಾದರ್ ಉತ್ಸಾಹದಿಂದ ಭಾಗವಹಿಸಿದರು. ಇದೇ ಸಂದರ್ಭಲ್ಲಿ ಹತ್ತನೇ ತರಗತಿಯ ವಿಧ್ಯಾರ್ಥಿಗಳಿಗಾಗಿ ವಿಶೇಷ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಕೂಡಾ ಹಮ್ಮಿಕೊಳ್ಳಲಾಗಿತ್ತು.
ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿರುವ ಹಲವಾರು ಸರಕಾರಿ ಶಾಲೆಗಳ ಪೈಕಿ ಬಬ್ಬುಕಟ್ಟೆ ಪೆರ್ಮನ್ನೂರು ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ.ಈಗಾಗಲೇ ಈ ಶಾಲೆಗೆ ನೂತನ ಕಟ್ಟಡ ಹಾಗೂ ಇತರ ಮೂಲಭೂತ ಸೌಕರ್ಯಗಳಿಗಾಗಿ ಇನ್ಫೋಸಿಸ್ ಸಂಸ್ಥೆಯಿಂದ ಒಂದೂವರೆ ಕೋಟಿ ಅನುದಾನ ಕಾದಿರಿಸಲಾಗಿದ್ದು ಖಾಸಗಿ ಜಮೀನಿನ ವಿವಾದದಿಂದಾಗಿ ಕಾಮಾಗಾರಿ ಪ್ರಾರಂಭಿಸಲು ಸಾಧ್ಯವಾಗಿಲ್ಲ,ಅತೀ ಶೀಘ್ರದಲ್ಲಿ ವಿವಾದ ಬಗೆಹರಿಸಿ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು,ಸದ್ಯದ ಮೂಲಭೂತ ಸೌಕರ್ಯಗಳಿಗಾಗಿ ಸುಮಾರು ಹತ್ತು ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿದ್ದೇನೆ ಎಂದು ಮಾಜಿ ಸಚಿವ,ಶಾಸಕ ಯು.ಟಿ.ಖಾದರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ನಗರ ಸಭೆ ಅಧ್ಯಕ್ಷೆ ಚಿತ್ರಕಲಾ,ಉಪಾಧ್ಯಕ್ಷ ಅಯ್ಯೂಬ್ ಮಂಚಿಲ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ,ದಿನೇಶ್ ರೈ,ಕ್ಷೇತ್ರ ಶಿಕ್ಷಣಾಧಿಕಾರಿಗಳು,ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರು,ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.