Politics: ಹೋಟೆಲ್ ಮೆನು ಕಾರ್ಡ್ ನಲ್ಲಿದ್ದಂತೆ ಭ್ರಷ್ಟಾಚಾರದ್ದೂ ಮೆನು ಕಾರ್ಡ್: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ವ್ಯಂಗ್ಯ
Friday, May 20, 2022
ಮಂಗಳೂರು: ಕರ್ನಾಟಕವೀಗ ಭ್ರಷ್ಟಾಚಾರದ ರಾಜಧಾನಿ ಆಗುತ್ತಿದೆ ಎಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಆರೋಪಿಸಿದ್ದಾರೆ.
ಬಿಜೆಪಿಯವರ ಸರ್ಕಾರದಲ್ಲಿ ಹೊಟೇಲ್ ನಲ್ಲಿರುವಂತೆ ಭ್ರಷ್ಟಾಚಾರದ ಮೆನು ಕಾರ್ಡ್ ಇರಬಹುದು. ಸಿಎಂ, ಮಂತ್ರಿ, ಅಧಿಕಾರಿಯಾಗಲು ಇಂತಿಷ್ಟು ಕೋಟಿ ಎಂದು ಇದೆ. ಇವರದ್ದು ಮೆನು ಕಾರ್ಡ್ ಭ್ರಷ್ಟಾಚಾರದ ಸರ್ಕಾರವಾಗಿದೆ. ಜನರು ಈ ಸರ್ಕಾರದ ಬಗ್ಗೆ ಭ್ರಮನಿರಸನರಾಗಿದ್ದಾರೆ ಎಂದರು.
ಭ್ರಷ್ಟಾಚಾರ, ಮಂತ್ರಿಮಂಡಲ ಇದಿಷ್ಟೇ ಚರ್ಚೆಯಾಗುತ್ತಿದೆ. ಯಾವುದೇ ಅಭಿವೃದ್ಧಿ ಬಗ್ಗೆ ಚರ್ಚೆಯಾಗುತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗೆ ಸರ್ಕಾರ ತಯಾರಿಲ್ಲ. ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭೀತಿ ಸರ್ಕಾರಕ್ಕಿದೆ. ಪಲಾಯನ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಆದಷ್ಟು ಬೇಗ ಚುನಾವಣೆಯನ್ನು ನಡೆಸಬೇಕು ಸಲೀಂ ಅಹ್ಮದ್ ಹೇಳಿದ್ದಾರೆ.