-->
PROTEST: ಬಾಲಕಿ ಆತ್ಮಹತ್ಯೆ ಪ್ರಕರಣ: ಕನ್ಯಾನದಲ್ಲಿ ವಿಹಿಂಪ, ಬಜರಂಗದಳ ಪ್ರತಿಭಟನೆ

PROTEST: ಬಾಲಕಿ ಆತ್ಮಹತ್ಯೆ ಪ್ರಕರಣ: ಕನ್ಯಾನದಲ್ಲಿ ವಿಹಿಂಪ, ಬಜರಂಗದಳ ಪ್ರತಿಭಟನೆ

 

ದ.ಕ. ಜಿಲ್ಲೆಯ ಕಣಿಯೂರಿನಲ್ಲಿ 14 ವರ್ಷದ ಬಾಲಕಿಯೊಬ್ಬಳು ನೇಣು ಬಿಗಿದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ವತಿಯಿಂದ ಕನ್ಯಾನ ಪೇಟೆಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ,  ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ, ವಿಹಿಂಪ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಉಪಸ್ಥಿತರಿದ್ದರು.

ನ್ಯಾಯ ದೊರಕದೇ ಇದ್ದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯಬಹುದು ಎಂದು ಎಚ್ಚರಿಸಿದ ಒಡಿಯೂರು ಶ್ರೀಗಳು, ಬಾಲಕಿ ಆತ್ಮಹತ್ಯೆಯ ಹಿಂದಿನ ಕಾರಣಗಳು, ವಾಮಾಚಾರ ನಡೆದಿರುವ ಸಂಗತಿಗಳು ಸಮಾಜದ ಆರೋಗ್ಯ ಕೆಡಿಸುವ ಸನ್ನಿವೇಶಗಳಾಗಿವೆ ಎಂದು ಅಭಿಪ್ರಾಯಪಟ್ಟರು.ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಮಾತನಾಡಿ, ಭೂಮಿಯಲ್ಲಿ ಹುಟ್ಟಿದ ವಿಕೃತ ವಿಷಬೀಜಗಳ ದಮನಕ್ಕೆ ಸಂಘಟಿತರಾಗಬೇಕಿದೆ ಎಂದರು.

ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ಲವ್ ಜಿಹಾದ್, ಡ್ರಗ್ ಮಾಫಿಯಾ ದೊಂದಿಗೆ ವಾಮಾಚಾರ ನಡೆಸುವ ಬೇರೆ ಬೇರೆ ಕೆಲಸಗಳು ನಡೆಯುತ್ತಿದ್ದು, ನಾವೆಲ್ಲರೂ ಸಂಘಟಿತರಾಗಬೇಕು, ದೇಶದ ಉದ್ದಗಲಕ್ಕೂ ಹೋರಾಟ ಅನಿವಾರ್ಯವಾಗಿದೆ ಎಂದರು.

ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ, ಪ್ರೀತಿಯ ಒತ್ತಡಕ್ಕೆ ಹೆಣ್ಣುಮಗಳು ಬಲಿಯಾಗಿದ್ದು, ಇದೇ ಲವ್ ಜಿಹಾದ್. ನ್ಯಾಯಕ್ಕಾಗಿ ಹಿಂದು ಸಂಘಟನೆಗಳು ಪ್ರತಿಭಟನೆ ಹೆಜ್ಜೆ ಹಿಡಿದಿವೆ, ದಲಿತ ಸಮುದಾಯದ ಬಾಲಕಿ ಸಾವಿಗೀಡಾದಾಗ ಸಮುದಾಯಕ್ಕೆ ಸೇರಿದ ಸಂಘಟನೆಗಳೂ ದನಿಯೆತ್ತಬೇಕು. ಕಾಂಗ್ರೆಸ್ ಪಕ್ಷ ಈ ಬಾಲಕಿ ಸಾವಿಗೆ ಮೌನ ವಹಿಸಿದ್ದರೆ, ಮುಸ್ಲಿಂ ಸಮುದಾಯದ ಮುಖಂಡರು ಇಂಥ ಕೃತ್ಯ ಎಸಗದಂತೆ ತಮ್ಮ ಸಮುದಾಯದ ಯುವಕರಿಗೆ ಬುದ್ಧಿವಾದ ಹೇಳಬೇಕು ಎಂದು ಒತ್ತಾಯಿಸಿದರು.

ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಕ.ಕೃಷ್ಣಪ್ಪ, ವಿಹಿಂದ ವಿಟ್ಲ ಅಧ್ಯಕ್ಷ ಪದ್ಮನಾಭ ಕಟ್ಟೆ, ಬಜರಂಗದಳ ವಿಟ್ಲ ಸಂಚಾಲಕ ಚಂದ್ರಹಾಸ ಕನ್ಯಾನ, ವಿಹಿಂಪ ಮುಖಂಡ ಗೋವರ್ಧನ್, ಕನ್ಯಾನ ಘಟಕಾಧ್ಯಕ್ಷ ಲೋಕೇಶ್ ಗೌಡ, ಬಜರಂಗದಳ ಸಂಚಾಲಕ ಕೃಷ್ಣಪ್ಪ ಗೌಡ ಪಣೆಯಡ್ಕ, ಕನ್ಯಾನ ಘಟಕ ವಿಹಿಂಪ ಕಾರ್ಯದರ್ಶಿ ಮನೋಜ್ ಕುಮಾರ್ ಬನಾರಿ, ಜಗದೀಶ್ ಸಿ.ಎಚ್., ಮುಖಂಡರಾದ ದಯಾನಂದ ಶೆಟ್ಟಿ ಉಜಿರೆಮಾರ್, ಲೋಹಿತ್ ಪನೋಲಿಬೈಲ್, ಪುನೀತ್ ಮಾಡ್ತಾರ್ ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ