-->
SPORTS: ಮಿನಿ ಒಲಂಪಿಕ್ಸ್ ಗೆ ದಕ್ಷಿಣ ಕನ್ನಡ ಜಿಲ್ಲೆಯ ಐವರು ಕ್ರೀಡಾಪಟುಗಳು ಆಯ್ಕೆ

SPORTS: ಮಿನಿ ಒಲಂಪಿಕ್ಸ್ ಗೆ ದಕ್ಷಿಣ ಕನ್ನಡ ಜಿಲ್ಲೆಯ ಐವರು ಕ್ರೀಡಾಪಟುಗಳು ಆಯ್ಕೆ

 

ಬಂಟ್ವಾಳ ತಾಲೂಕಿನ ಮೂವರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ 5 ಮಂದಿ ಟ್ವೆಕಾಂಡೋ ಪಟುಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೇ 15 ರಿಂದ 21ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ದ್ವಿತೀಯ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ  ಆಯ್ಕೆಯಾಗಿದ್ದಾರೆ.

ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ಇವುಗಳ ಆಶ್ರಯದಲ್ಲಿ ನಡೆಯುವ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಬಂಟ್ವಾಳ ತಾಲೂಕಿನ ನೆಹರುನಗರ ನಿವಾಸಿಗಳಾದ ಮುಹಮ್ಮದ್ ನಿಹಾಲ್ ನಝೀರ್ ಹಾಗೂ ಮುಹಮ್ಮದ್ ಹಿಶಾಂ ಕ್ರಮವಾಗಿ 49 ಕೆಜಿ ಹಾಗೂ 35 ಕೆಜಿ ವಿಭಾಗದಲ್ಲಿ, ಗೂಡಿನಬಳಿ ನಿವಾಸಿ ಮುಹಮ್ಮದ್ ಅಯಾನ್ 54 ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಆಯ್ಕೆಯಾದರೆ, ಮಂಗಳೂರು ತಾಲೂಕಿನ ಕೃಷ್ಣಾಪುರ ನಿವಾಸಿ ಮುಹಮ್ಮದ್ ಮುಸ್ತಫಾ 31 ಕೆಜಿ ವಿಭಾಗದಲ್ಲಿ, ಮುಹಮ್ಮದ್ ಫೈಝಲ್ 39 ಕೆಜಿ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

ಮಿನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಟ್ವೆಕ್ವಾಂಡೋ ಸ್ಪರ್ಧೆಯು ಮೇ 20 ಹಾಗೂ 21ನೇ ದಿನಾಂಕಗಳಂದು ನಡೆಯಲಿದ್ದು, ಹಲವು ಜಿಲ್ಲೆಯ ಟೇಕ್ವಾಂಡೋ ಪಟುಗಳೊಂದಿಗೆ ಮೇಲಿನ ಕ್ರೀಡಾಪಟುಗಳು ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು   ಜಿಲ್ಲಾ ಟ್ವೆಕಾಂಡೋ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ಯಾಮರಾಯ ಸುವರ್ಣ, ಮುಹಮ್ಮದ್ ನಸೀರ್, ಅಧ್ಯಕ್ಷ ಟಿ ಅಬ್ದುಲ್ ಅಝೀಝ್, ಉಪಾಧ್ಯಕ್ಷ ಶಾಂತರಾಮ ಶೆಣೈ, ಪ್ರಧಾನ ಕಾರ್ಯದರ್ಶಿ ಇಸಾಕ್ ನಂದಾವರ, ಜೊತೆ ಕಾರ್ಯದರ್ಶಿ ಸಿರಾಜ್ ಕುಳಾಯಿ, ಜಿಲ್ಲಾ ಮುಖ್ಯ ತರಬೇತುದಾರ ಇಸಾಕ್ ಇಸ್ಮಾಯಿಲ್ ನಂದಾವರ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ