-->
CRIME: ಹಲ್ಲೆ, ಜೀವ ಬೆದರಿಕೆ: ಸೆಕ್ಯುರಿಟಿ ಕೆಲಸ ಮಾಡುವ ವ್ಯಕ್ತಿಯಿಂದ ದೂರು

CRIME: ಹಲ್ಲೆ, ಜೀವ ಬೆದರಿಕೆ: ಸೆಕ್ಯುರಿಟಿ ಕೆಲಸ ಮಾಡುವ ವ್ಯಕ್ತಿಯಿಂದ ದೂರು

 

ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಸಂದರ್ಭ ಐದಾರು ಮಂದಿ ತನಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾಗಿ ವ್ಯಕ್ತಿಯೊಬ್ಬರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಈ ಕುರಿತು ತುಂಬೆಯ ಅಬ್ದುಲ್ ರಹಮಾನ್ ದೂರು ನೀಡಿದ್ದಾರೆ. ತಾನು ವಾಸವಾಗಿರುವ ಅಪಾರ್ಟ್ ಮೆಂಟ್ ನ ಸೆಕ್ಯುರಿಟಿ ಊರಿಗೆ ಹೋಗಿದ್ದ ಸಂದರ್ಭ ತಾನೇ ಸೆಕ್ಯುರಿಟಿ ಕೆಲಸವನ್ನು ಮಾಡುತ್ತಿದ್ದು, ಈ ಸಂದರ್ಭ ಪಾರ್ಕ್ ಬಳಿ ಬೊಬ್ಬೆ ಹಾಕುವ ಶಬ್ದ ಕೇಳಿ ವಿಚಾರಿಸಿದಾಗ, ಐದಾರು ಮಂದಿ ಗಲಾಟೆ ಮಾಡುತ್ತಿದ್ದುದು ಕಂಡುಬಂದಿದ್ದು, ಇಲ್ಲಿ ಗಲಾಟೆ ಮಾಡಬೇಡಿ ಎಂದಾಗ, ರಾಡ್ ನಿಂದ ತನಗೆ ಹಲ್ಲೆ ನಡೆಸಿದ್ದಾಗಿ ದೂರಲಾಗಿದ್ದು, ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ