ACCIDENT: ಟೋಲ್ ಗೇಟ್ ಮೇಲೆರಗಿದ ಆಂಬುಲೆನ್ಸ್ : ನಾಲ್ವರು ಸಾವು
Wednesday, July 20, 2022
ಶಿರೂರು: ಉಡುಪಿ ಜಿಲ್ಲೆಯ ಶಿರೂರಿನಲ್ಲಿರುವ ಟೋಲ್ ಗೇಟ್ ನ ಕಂಬಕ್ಕೆ ಅತಿವೇಗವಾಗಿ ಬಂದ ಆಂಬುಲೆನ್ಸ್ ಒಂದು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ. ಮೂವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಟೋಲ್ ಗೇಟ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.
ಹೊನ್ನಾವರದಿಂದ ಕುಂದಾಪುರದ ಆಸ್ಪತ್ರೆಗೆ ರೋಗಿಯನ್ನು ಕರೆ ತರುವ ವೇಳೆ ಆಂಬ್ಯುಲೆನ್ಸ್ ಶಿರೂರು ಟೋಲ್ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಆಂಬ್ಯುಲೆನ್ಸ್ ಅಪಘಾತದ ದೃಶ್ಯಗಳು ಟೋಲ್ ಗೇಟ್ ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಳೆಯ ನಡುವೆಯೇ ವೇಗವಾಗಿ ಬಂದ ಆಂಬ್ಯುಲೆನ್ಸ್ ನಿಯಂತ್ರಣ ಕಳೆದು ಕೊಂಡು ಟೋಲ್ ಗೇಟ್ ನ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ವೇಳೆ ನೆಲಕ್ಕೆ ಬೀಳುತ್ತಿದ್ದಂತೆ ಆಂಬ್ಯುಲೆನ್ಸ್ ನಲ್ಲಿ ಇದ್ದವರು ಹಿಂಬದಿಯ ಟೋರ್ ಮೂಲಕ ಹೊರಕ್ಕೆ ಬೀಳುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.