POLITICS: ಮೊದಲೇ ಇದನ್ನು ಮಾಡ್ತಿದ್ರೆ, ಮಹಾ ವಿಕಾಸ್ ಆಘಾಡಿ ಹುಟ್ತನೇ ಇರ್ಲಿಲ್ಲ!! - ಅಸಮಾಧಾನ ಹೊರಹಾಕಿದ ಉದ್ಧವ್ ಠಾಕ್ರೆ
Friday, July 1, 2022
ಶಿವಸೇನೆಗೆ ಸಿಎಂ ನೀಡಬೇಕು ಎಂದು ನಾನು ಅಂದೇ ಅಮಿತ್ ಶಾ ಅವರಿಗೆ ತಿಳಿಸಿದ್ದೆ. ಹಾಗೆ ಆಗಿದ್ದರೆ, ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಬರ್ತನೇ ಇರಲಿಲ್ಲ ಎಂದಿದ್ದಾರೆ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ.
ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು, ನನ್ನ ಮೇಲಿನ ಕೋಪವನ್ನು ಮುಂಬೈ ಜನರೊಂದಿಗೆ ತೋರಿಸಬೇಡಿ ಎಂದು ಹೊಸ ಸರ್ಕಾರಕ್ಕೆ ಅವರು ಹಲವು ಸೂಚನೆಗಳನ್ನೂ ನೀಡಿದ್ದಾರೆ.
ಏಕನಾಥ ಶಿಂಧೆ |
ಮುಂಬೈನ ಮೆಟ್ರೋ ಕಾರ್ ಶೆಡ್ ಯೋಜನೆಯನ್ನು 2019ರಲ್ಲಿ ದೇವೇಂದ್ರ ಫಡ್ನವೀಸ್ ಸರ್ಕಾರ ಯೋಚಿಸಿದಂತೆ ಬದಲಾವಣೆ ಮಾಡುವ ವಿಚಾರದ ಕುರಿತು ಅಸಮಾಧಾನ ಹೊರಹಾಕಿರುವ ಮಾಜಿ ಸಿಎಂ ಉದ್ಧವ್ ಠಾಕ್ರೆ, ತಮ್ಮ ಸರ್ಕಾರ ಕೈಗೊಂಡಿದ್ದ ಮೆಟ್ರೋ ಶೆಡ್ ಸ್ಥಳ ತೀರ್ಮಾನ ಬದಲಾವಣೆ ಬೇಡ ಎಂದು ಸಲಹೆ ನೀಡಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಗೆದ್ದ ನಂತರ 2019 ರಲ್ಲಿ ಬಿಜೆಪಿಯೊಂದಿಗಿನ ತನ್ನ ಪಕ್ಷದ 25 ವರ್ಷಗಳ ಮೈತ್ರಿಯನ್ನು ಕೊನೆಗೊಳಿಸಿದ ಕಾರಣವನ್ನು ಠಾಕ್ರೆ ಉಲ್ಲೇಖಿಸಿದ ಠಾಕ್ರೆ, 2.5 ವರ್ಷಗಳ ಕಾಲ ಶಿವಸೇನೆ ಮುಖ್ಯಮಂತ್ರಿಯಾಗಿರಬೇಕೆಂದು ನಾನು ಅಮಿತ್ ಶಾಗೆ ಮೊದಲೇ ಹೇಳಿದ್ದೆ, ಅವರು ಇದನ್ನು ಮೊದಲೇ ಮಾಡಿದ್ದರೆ, ಮಹಾ ವಿಕಾಸ್ ಅಘಾಡಿ ಆಗುತ್ತಿರಲಿಲ್ಲ ಎಂದರು.
ಅಮಿತ್ ಶಾ ಅವರು 5 ವರ್ಷದ ಸರ್ಕಾರದ ಅವಧಿಯಲ್ಲಿ ರೊಟೇಷನಲ್ ಆಧಾರದ ಮೇಲೆ ಬಿಜೆಪಿ ಮತ್ತು ಶಿವಸೇನೆಯ ಮುಖ್ಯಮಂತ್ರಿಗಳನ್ನ ಮಾಡಲು ಒಪ್ಪಲೇ ಇಲ್ಲ. ಬಿಜೆಪಿಯೊಂದಿಗೆ ಬೇರ್ಪಟ್ಟ ನಂತರ, ಸರ್ಕಾರವನ್ನು ರಚಿಸಲು ಮತ್ತು ಬಿಜೆಪಿಯನ್ನು ಅಧಿಕಾರ ಹಿಡಿಯದಂತೆ ಮಾಡಲು ಸೈದ್ಧಾಂತಿಕವಾಗಿ ವಿರುದ್ಧ ಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಸಹಕರಿಸಲು ಒಪ್ಪಿಕೊಳ್ಳಬೇಕಾಯಿತು ಎಂದು ಉದ್ಧವ್ ಠಾಕ್ರೆ ಹೇಳಿದರು.