KERALA: ಇಬ್ರೂ ಒಟ್ಟಿಗೆ ಪಾಸ್: ಕೇರಳ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಅಮ್ಮ, ಮಗ ಖುಷ್!!
ತಿರುವನಂತಪುರಂ: ನಾವಿಬ್ಬರೂ ಕೋಚಿಂಗ್ ಕ್ಲಾಸ್‌ಗಳಿಗೆ ಒಟ್ಟಿಗೆ ಹೋಗಿದ್ದೆವು. ನನ್ನ ತಂದೆ ನಮಗೆ ಎಲ್ಲಾ ಸೌಕರ್ಯಗಳನ್ನು ಏರ್ಪಡಿಸಿದರು. ನಮ್ಮ ಶಿಕ್ಷಕರಿಂದ ನಮಗೆ ಸಾಕಷ್ಟು ಪ್ರೇರಣೆ ಸಿಕ್ಕಿದೆ. ನಾವಿಬ್ಬರೂ ಒಟ್ಟಿಗೆ ಓದಿದ್ದೇವೆ, ಆದರೆ ಒಟ್ಟಿಗೆ ಅರ್ಹತೆ ಪಡೆಯುತ್ತೇವೆ ಎಂದು ಎಂದಿಗೂ ಯೋಚಿಸಲಿಲ್ಲ ಎನ್ನುತ್ತಾರೆ ವಿವೇಕ್.
ಇವರು ಕೇರಳದ ಮಲ್ಲಪ್ಪುರದವರು. ವಿವೇಕ್ ಮತ್ತು ಅವರ ಅಮ್ಮ ಬಿಂದು ಇಬ್ಬರೂ ಕೆಪಿಎಸ್ ಸಿ (ಕೇರಳದ ಸಾರ್ವಜನಿಕ ಸೇವಾ ಆಯೋಗ) ಪರೀಕ್ಷೆಯನ್ನು ಪಾಸ್ ಆಗಿದ್ದಾರೆ. 24 ವರ್ಷದ ವಿವೇಕ್ ಮತ್ತು 42 ವರ್ಷದ ಬಿಂದು ಒಟ್ಟಿಗೆ ಪಾಸ್ ಆಗಿದ್ದು, ಸಾಧಿಸುವ ಛಲ ಇದ್ದರೆ ಸಾಧ್ಯ ಎಂಬುದನ್ನು ನಿರೂಪಿಸಿದ್ದಾರೆ.
ಮಗ 10 ನೇ ತರಗತಿಯಲ್ಲಿದ್ದಾಗ ತಾಯಿ ಬಿಂದು, ಅವನನ್ನು ಪ್ರೋತ್ಸಾಹಿಸಲು ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು. ಇದು ಕೇರಳ ಪಿಎಸ್ ಸಿ ಪರೀಕ್ಷೆಗಳಿಗೆ ತಯಾರಾಗಲು ಅವರನ್ನು ಪ್ರೇರೇಪಿಸಿತು.
ಇದೀಗ ಅವರು ಮತ್ತು ಅವರ ಮಗ ಒಟ್ಟಿಗೆ ಸರ್ಕಾರಿ ಕೆಲ್ಸ ಸೇರ್ಲಿಕ್ಕಿದ್ದಾರೆ. ಕೇರಳದಲ್ಲಿ ಸ್ಟ್ರೀಮ್-2 ಹುದ್ದೆಗಳಿಗೆ ವಯಸ್ಸಿನ ಮಿತಿ 40. ಆದರೆ ನಿರ್ದಿಷ್ಟ ವರ್ಗಗಳಿಗೆ ಕೆಲವು ವಿನಾಯಿತಿಗಳಿವೆ. ಇತರೆ ಹಿಂದುಳಿದ ವರ್ಗಗಳ ಗುಂಪಿನಲ್ಲಿ ಮೂರು ವರ್ಷಗಳವರೆಗೆ ಸಡಿಲಿಕೆ ಇರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಧವೆಯರಿಗೆ ಇದು ಐದು ವರ್ಷಗಳವರೆಗೆ ಇರುತ್ತದೆ. ಮಾತು, ಶ್ರವಣದೋಷ ಮತ್ತು ದೃಷ್ಟಿ ದೋಷವುಳ್ಳವರಿಗೆ 15 ವರ್ಷಗಳು, ಅಂಗವಿಕಲರಿಗೆ 10 ವರ್ಷಗಳಿವೆ.
ಬಿಂದು ಲೋವರ್ ಡಿವಿಜನಲ್ ಕ್ಲರ್ಕ್ (LDC) ಪರೀಕ್ಷೆಯಲ್ಲಿ 38 ನೇ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದರೆ, ಅವರ ಮಗ 92 ನೇ ಶ್ರೇಣಿಯೊಂದಿಗೆ ಕೊನೆಯ ದರ್ಜೆಯ ಸೇವಕರ (LGS) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. LGS ಪರೀಕ್ಷೆಗೆ ಎರಡು ಬಾರಿ ಪ್ರಯತ್ನ ಮತ್ತು LDC ಗೆ ಒಂದು ಬಾರಿ ಪ್ರಯತ್ನದ ನಂತರ ಬಿಂದು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
Kerala | A 42-year-old mother and her 24 years old son from Malappuram have cleared Public Service Commission (PSC) examination together pic.twitter.com/BlBKYJiDHh
— ANI (@ANI) August 10, 2022