-->
NEWS: ಬಿಜೆಪಿ ನಾಯಕಿ ಸೋನಾಲಿ ಸಾವಿನ ಸುತ್ತ ಅನುಮಾನದ ಹುತ್ತ

NEWS: ಬಿಜೆಪಿ ನಾಯಕಿ ಸೋನಾಲಿ ಸಾವಿನ ಸುತ್ತ ಅನುಮಾನದ ಹುತ್ತ

ಗೋವಾದಲ್ಲಿ ಹರಿಯಾಣದ ಬಿಜೆಪಿ ನಾಯಕಿ ಮತ್ತು ಟಿಕ್ ಟಾಕ್ ಸ್ಟಾರ್​ ಸೋನಾಲಿ ಫೋಗಟ್ ಸಾವಿನ ನಂತರ, ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ. 
ಆಗಸ್ಟ್ 22 ರಿಂದ 25 ರವರೆಗೆ ಸೋನಾಲಿ ಫೋಗಟ್ ಗೋವಾ ಪ್ರವಾಸದಲ್ಲಿದ್ದರು. ಆಗಸ್ಟ್ 22 ರಂದು ಆಕೆ ಗೋವಾಕ್ಕೆ ಬಂದಿದ್ದರು. ಮತ್ತು ಅಂಜುನಾದ ಹೋಟೆಲ್‌ನಲ್ಲಿ ತಂಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 
ಹರಿಯಾಣದ ಫತೇಹಾಬಾದ್‌ನ ಭೂತಾನ್ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದು, 2019 ರ ವಿಧಾನಸಭಾ ಚುನಾವಣೆಯಲ್ಲಿ ಹರಿಯಾಣದ ಆದಂಪುರ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಟಿಕೆಟ್‌ ಪಡೆದು ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿದ್ದರು.
ಮೂರು ಬಾರಿ ಶಾಸಕರಾಗಿದ್ದ ಮತ್ತು  ಎರಡು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದ ಭಜನ್ ಲಾಲ್ ಅವರ ಮಗ ಕುಲದೀಪ್ ಬಿಷ್ಣೋಯ್ ವಿರುದ್ಧ ಸೊನಾಲಿ ಸೋಲು ಕಂಡಿದ್ದರು. ಆದರೆ ಸೋಲನ್ನು ಅನುಭವಿಸಿದರೂ ಸಹ ಅವರ ಪ್ರಖ್ಯಾತಿ ಕುಂದಿರಲಿಲ್ಲ.  

ಟಿಕ್ ಟಾಕ್ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದ ಸೋನಾಲಿ ರಾಜ್ಯಾದ್ಯಂತ ಫಾಲೋವರ್ಸ್ಗಳನ್ನು ಹೊಂದಿದ್ದರು.
ಮುಂಬರುವ ಆದಂಪುರ್ ಉಪಚುನಾವಣೆಯಲ್ಲಿ ಸೋನಾಲಿಯವರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ಹೇಳಲಾಗಿತ್ತು.

ಇದೀಗ ಬಿಜೆಪಿ ನಾಯಕಿ ಸೋ‌ನಾಲಿ ಪೋಗಟ್ ಸೋನಾಲಿ ಫೋಗಟ್ ಅವರನ್ನು ಆಕೆಯ ಸಹಚರರು 'ಕೊಲೆ' ಮಾಡಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ.ಸಾವಿನ ಸುತ್ತಲಿನ ಸಂದರ್ಭಗಳನ್ನು ಉಲ್ಲೇಖಿಸಿದ ಕುಟುಂಬವು ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಹೇಳಿದೆ. ಅವರ ಪುತ್ರಿ ಯಶೋಧರ ಅವರು ಬುಧವಾರ ತಮ್ಮ ತಾಯಿಗೆ 'ನ್ಯಾಯ'ಕ್ಕಾಗಿ ಒತ್ತಾಯಿಸಿದ್ದಾರೆ ಮತ್ತು  ಸಾವಿನ ತನಿಖೆಯಾಗಬೇಕು ಎಂದು ಹೇಳಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ನ್ಯಾಯ ದೊರಕಿಸಿಕೊಡಲು ನಮಗೆ ಸಹಾಯ ಮಾಡುವಂತೆ ನಾವು ಪ್ರಧಾನಿಗೆ ಮನವಿ ಮಾಡುತ್ತೇವೆ ಎಂದು ಅವರ ಸಹೋದರ ಹೇಳಿದರು. ಫೋಗಟ್ ಅವರ ಮರಣೋತ್ತರ ಪರೀಕ್ಷೆಯನ್ನು ದೆಹಲಿಯ ಆಲ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಅಥವಾ ಜೈಪುರದ ಏಮ್ಸ್‌ನಲ್ಲಿ ನಡೆಸಬೇಕೆಂದು ಕುಟುಂಬವು ಒತ್ತಾಯಿಸಿದೆ.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ