NEWS: ಮಗಳ ಬರ್ತ್ ಡೇ ಆಚರಣೆಗೆ ಫ್ರೀಯಾಗಿ 1 ಲಕ್ಷ ಪಾನಿಪುರಿ ವಿತರಿಸಿದ ಅಪ್ಪ!!!
Wednesday, August 31, 2022
ಮಧ್ಯಪ್ರದೇಶ ರಾಜ್ಯದ ಕೊಲಾರ್ ಎಂಬ ಪ್ರದೇಶದ ಪಾನಿಪುರಿ ಮಾರಾಟಗಾರರೊಬ್ಬರು ತನ್ನ ಮಗಳ ಬರ್ತ್ ಡೇಗೆ ಮಾಡಿದ್ದೇನು?
ಬರೋಬ್ಬರಿ 1 ಲಕ್ಷದಷ್ಟು ಪಾನಿಪುರಿಗಳನ್ನು ಉಚಿತವಾಗಿ ವಿತರಿಸಿದ್ದು.
ಕಳೆದ ಬುಧವಾರ ಪಾನಿಪುರಿ ವ್ಯಾಪಾರಿ ಅಂಚಲ್ ಗುಪ್ತಾ ಅವರ ಮಗಳು ಅನೋಖಿ ಬರ್ತ್ ಡೇ. ಮಗಳಿಗೆ ಒಂದು ವರ್ಷವಾದ ಸವಿನೆನಪಿಗೆ ಸ್ಥಳೀಯ ಬಂಜಾರಿ ಮೈದಾನದಲ್ಲಿ ದೊಡ್ಡದಾದ ಟೆಂಟ್ ಹಾಕಿ, 21 ಸ್ಟಾಲ್ ಗಳನ್ನು ಸ್ಥಾಪಿಸಿ ಅಲ್ಲಿ ಬಂದವರಿಗೆಲ್ಲಾ ಪಾನಿಪುರಿ ವಿತರಿಸಿದರು. ಹೀಗೆ ವಿತರಿಸಿದ ಪಾನಿಪುರಿಗಳ ಸಂಖ್ಯೆ 1 ಲಕ್ಷ ದಾಟಿತ್ತು.
ಈ ಮೂಲಕ 'ಬೇಟಿ ಬಚಾವೋ, ಬೇಟಿ ಪಢಾವೋ' ಎಂಬ ಸರ್ಕಾರದ ಯೋಜನೆಗೆ ಬೆಂಬಲ ನೀಡಿದ್ದೇನೆ ಎಂದು ಹೇಳಿಕೊಂಡ ಅವರು, ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯತೆಯ ಬಗ್ಗೆ ಸಂದೇಶವನ್ನು ಕಳುಹಿಸುವ ಉದ್ದೇಶದಿಂದ ಆಚರಣೆಯ ವೆಚ್ಚದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದರು.
ಅಂಚಲ್ ಗುಪ್ತಾ ಅವರ ಈ ಕಾರ್ಯಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ ಪ್ರಶಂಸಿಸಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ್ದ ಸ್ಥಳೀಯ ಶಾಸಕ ರಾಮೇಶ್ವರ್ ಶರ್ಮಾ ಅವರೂ ಆಂಚಲ್ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
#MadhyaPradesh: Kolar's panipuri dad #AnchalGupta is back; celebrates #daughter's first #birthday by distributing over 1 lakh #freegolgappas#PaniPuri #Foodie #Food #India #MP #Kolar #Viral #Video #Indian #News #Trending #Bhopal pic.twitter.com/HKm7SugJcW
— Free Press Journal (@fpjindia) August 18, 2022