NEWS: ನನಗೆ ಮಯೋಸೈಟಿಸ್ ಕಾಯಿಲೆ ಇದೆ - ನಟಿ ಸಮಂತಾ ಟ್ವೀಟ್ ಗೆ ಬೆಚ್ಚಿಬಿದ್ದ ಚಿತ್ರರಂಗ, ಬೇಗ ಚೇತರಿಸಿಕೊಳ್ಳಿ ಎಂದ ಅಭಿಮಾನಿಗಳು

NEWS: ನನಗೆ ಮಯೋಸೈಟಿಸ್ ಕಾಯಿಲೆ ಇದೆ - ನಟಿ ಸಮಂತಾ ಟ್ವೀಟ್ ಗೆ ಬೆಚ್ಚಿಬಿದ್ದ ಚಿತ್ರರಂಗ, ಬೇಗ ಚೇತರಿಸಿಕೊಳ್ಳಿ ಎಂದ ಅಭಿಮಾನಿಗಳು

 


ಅಕ್ಕಿನೇನಿ ನಾಗಚೈತನ್ಯ ಜೊತೆ ವಿಚ್ಚೇಧನ ಬಳಿಕ ಹೊಸ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿದ್ದ ಸ್ಟಾರ್ ನಟಿ ಸಮಂತಾ ರುತ್ ಪ್ರಭು, ಇತ್ತೀಚೆಗೆ ಪುಷ್ಪಾ ಸಿನಿಮಾದಲ್ಲಿ 'ಊ ಅಂಟಾವಾ' ಹಾಡಿಗೆ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕುವ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದರು. ಇದೀಗ ಮಯೋಸೈಟಿಸ್ ಕಾಯಿಲೆ ನನಗಿದೆ ಎಂದು ಟ್ವೀಟ್ ಮಾಡಿರುವುದು ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. 


 ಸಮಂತಾ ಇತ್ತೀಚೆಗೆ ಯಶೋಧಾ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದು, ಅದರ ಟ್ರೇಲರ್ ಬಿಡುಗಡೆಯಾಗಿದ್ದು ಅದು ಹಿಟ್ ಆಗಿದೆ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಮಂತಾ, 'ನಮ್ಮ ಯಶೋದಾ ಚಿತ್ರದ ಟ್ರೇಲರ್ಗೆ ನೀವು ನೀಡಿದ ಪ್ರತಿಕ್ರಿಯೆ ನೋಡಿ ಬಹಳ ಖುಷಿ ಆಗಿದೆ. ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ನನಗೆ ನಿಮ್ಮ ಪ್ರೀತಿ ನೀಡಿದೆ. ಕೆಲ ತಿಂಗಳ ಹಿಂದೆಯಷ್ಟೇ ನನಗೆ ಮಯೋಸೈಟಿಸ್‌ (Myositis) ಎಂಬ ಕಾಯಿಲೆ ಇರುವುದು ಗೊತ್ತಾಯಿತು. ಇದರಿಂದ ವಾಸಿಯಾದ ಮೇಲೆಯೇ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ನಾನು ಅಂದುಕೊಂಡಿದ್ದೆ. ಆದರೆ ಈ ಸಮಸ್ಯೆ ವಾಸಿಯಾಗಲು ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ.. ಆದರೆ ಶೀಘ್ರದಲ್ಲೇ ನಾನು ಸಂಪೂರ್ಣವಾಗಿ ಇದರಿಂದ ಗುಣವಾಗುವೆ ಎಂದು ವೈದ್ಯರು ನನಗೆ ಭರವಸೆ ನೀಡಿದ್ದಾರೆ' ಎಂದು ಹೇಳಿಕೊಂಡಿದ್ದಾರೆ

ನನ್ನ ಬದುಕಿನಲ್ಲಿ ಮಾನಸಿಕವಾಗಿ, ದೈಹಿಕವಾಗಿ ಒಳ್ಳೆಯ ಹಾಗೂ ಕೆಟ್ಟ ದಿನಗಳು ಎರಡೂ ಇದ್ದವು. ಇದನ್ನು ನನ್ನಿಂದ ನಿರ್ವಹಿಸಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿಗಳೂ ಕೂಡ ಕಳೆದು ಹೋಗಿವೆ. ಈಗ ಈ ಸಮಸ್ಯೆಯಿಂದ ಬೇಗನೇ ಚೇತರಿಸಿಕೊಳ್ಳುತ್ತೇನೆ ಎಂದು ಅನಿಸುತ್ತದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ.. ಈ ಕಠಿಣ ಸಮಯ ಕೂಡ ಕಳೆದು ಹೋಗುತ್ತದೆ..' ಎಂದು ಸಮಂತಾ ಹೇಳಿಕೊಂಡಿದ್ದಾರೆ. ಮಯೋಸೈಟಿಸ್‌ನಿಂದ ಆಯಾಸ, ಸ್ನಾಯು ನೋವು, ಉಸಿರಾಟದ ಸಮಸ್ಯೆ, ತಿನ್ನಲು ಮತ್ತು ಕುಡಿಯಲು ತೊಂದರೆ ಆಗುವಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದು, ಅಭಿಮಾನಿಗಳಿಗೆ ಆಘಾತ ತಂದಿದೆ.


 ಈಗಾಗಲೇ ಮೆಘಾಸ್ಟಾರ್ ಚಿರಂಜೀವಿ ಸಹಿತ ಚಿತ್ರರಂಗದ ಗಣ್ಯರು ಏನೂ ಆಗುವುದಿಲ್ಲ, ಗುಣವಾಗುತ್ತೀಯ ಎಂಬ ಧೈರ್ಯದ ಮಾತುಗಳನ್ನಾಡಿದರೆ, ಬೇಗ ಚೇತರಿಸಿಕೊಳ್ಳಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಸಮಂತಾ ಟ್ವೀಟ್ ನಲ್ಲೇನಿದೆ? ಇಲ್ಲಿದೆ ವಿವರ




Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ