MOVIE: ರಕ್ಷಿತ್ ಶೆಟ್ಟಿ ಅವರ ಮತ್ತೊಂದು ಸಿನಿಮಾ ‘ಸಪ್ತಸಾಗರದಾಚೆ ಎಲ್ಲೊ’ : ಮೂಡಿದೆ ಕುತೂಹಲ
Friday, November 11, 2022
ರಕ್ಷಿತ್ ಶೆಟ್ಟಿ ಅವರ ಮತ್ತೊಂದು ಸಿನಿಮಾ ‘ಸಪ್ತಸಾಗರದಾಚೆ ಎಲ್ಲೊ’ : ಮೂಡಿದೆ ಕುತೂಹಲ
ರಿಷಭ್ ಶೆಟ್ಟಿ ಅವರ ಕಾಂತಾರ ಪ್ರಚಂಡ ದಾಖಲೆ ಮಾಡಿದ್ದರೆ, ಶೆಟ್ಟಿ ಸ್ನೇಹಿತರಲ್ಲೊಬ್ಬರಾದ ರಕ್ಷಿತ್ ಶೆಟ್ಟಿ ಮತ್ತೊಂದು ಸಿನಿಮಾ ಮುಗಿಸಿದ್ದಾರೆ. ಅದರ ಟೀಸರ್ ಈಗಾಗಲೇ ಜನಪ್ರಿಯತೆ ಗಳಿಸಿದೆ.
ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಚುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರ, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಇತರರು ಅಭಿನಯಿಸಿರುವ ಈ ಚಿತ್ರವನ್ನು ಸ್ವತಃ ರಕ್ಷಿತ್ ಶೆಟ್ಟಿ ನಿರ್ಮಿಸಿದ್ದಾರೆ. ಚಿತ್ರಕತೆ, ನಿರ್ದೇಶನ ಹೇಮಂತ್ ಎಂ.ರಾವ್ ಅವರದ್ದಾದರೆ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಇದಕ್ಕಿದೆ. ಸಂಗೀತ ಚರಣ್ ರಾಜ್ ಅವರದ್ದು.