VK HEROS: ವಿಜಯ ಕರ್ನಾಟಕ ಪತ್ರಿಕೆಯ ವಿಕ ಹೀರೋಸ್ ಆಯ್ಕೆಗೆ ಆಹ್ವಾನ
Wednesday, March 1, 2023
ನಾಡಿನ ಪ್ರತಿಷ್ಠಿತ ಕನ್ನಡ ದಿನಪತ್ರಿಕೆಯಾದ 'ವಿಜಯ ಕರ್ನಾಟಕ' ದಕ್ಷಿಣ ಕನ್ನಡ ಜಿಲ್ಲೆಯ 12 ಕ್ಷೇತ್ರಗಳ ಅನನ್ಯ ಸಾಧಕರನ್ನು ಗುರುತಿಸುವ "ವಿಕ ಹೀರೋಸ್’ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ.
ಮಂಗಳೂರು: ಸಮಾಜದ ನಾನಾ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಮಾನವೀಯ ಸೇವೆ ಮಾಡುತ್ತಿರುವ ಎಲೆ ಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸುವ ಅಪೂರ್ವ ಅಭಿಯಾನವನ್ನು ವಿಜಯ ಕರ್ನಾಟಕ ಪತ್ರಿಕೆ ಕೈಗೆತ್ತಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿಕ ಹೀರೋಸ್ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 12 ಕ್ಷೇತ್ರಗಳನ್ನು ಇದಕ್ಕಾಗಿ ಗುರುತಿಸಲಾಗಿದೆ. ವಿವರಗಳಿಗೆ ಮುಂದೆ ಓದಿರಿ.
- ಹೋಮ್ ಗಾರ್ಡ್ ಹುದ್ದೆಯಲ್ಲಿದ್ದುಕೊಂಡು ಅಸಾಧಾರಣ ಸೇವೆ ಮಾಡಿದವರನ್ನು ಗುರುತಿಸಿ ವಿಕ ಹೋಮ್ ಗಾರ್ಡ್ ಪುರಸ್ಕಾರ ನೀಡಲಾಗುತ್ತದೆ.
- ಆಟೋ ಚಾಲಕರಾಗಿದ್ದುಕೊಂಡು ಅದರೊಂದಿಗೆ ಆಪತ್ಬಾಂಧವರಾಗಿ, ಸಮಾಜದ ಕಣ್ಮಣಿಯಾಗಿ ಕೆಲಸ ಮಾಡುವ ಆಟೋ ಚಾಲಕರನ್ನು ಗುರುತಿಸಿ ವಿಕ ಆಟೋ ಸಾರಥಿ ಪುರಸ್ಕಾರ ನೀಡಲಾಗುತ್ತದೆ.
- ಅಪಘಾತವಾಗದಂತೆ ಬಸ್ ಚಲಾಯಿಸಿ, ನಿಜವಾದ ಸಾರಥಿಯಾಗಿ ಸೇವೆ ಸಲ್ಲಿಸುತ್ತಿರುವ ಸರಕಾರಿ ಮತ್ತು ಖಾಸಗಿ ಬಸ್ ಚಾಲಕರನ್ನು ಗುರುತಿಸಿ ವಿಕ ಬಸ್ ಸಾರಥಿ ಪುರಸ್ಕಾರ ನೀಡಲಾಗುತ್ತದೆ.
- ವೈದ್ಯಕೀಯ ಕ್ಷೇತ್ರವನ್ನು ತಪಸ್ಸಿನ ರೀತಿಯಲ್ಲಿ ಸ್ವೀಕರಿಸಿ ಸೇವೆ ಮಾಡುವ ಅಪೂರ್ವ ವೈದ್ಯರನ್ನು ಗುರುತಿಸಿ ವಿಕ ಡಾಕ್ಟರ್ ಪುರಸ್ಕಾರ ನೀಡಲಾಗುತ್ತದೆ.
- ಸುಗಮ ವಾಹನ ಸಂಚಾರಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಟ್ರಾಫಿಕ್ ಪೊಲೀಸರನ್ನು ಗುರುತಿಸಿ ವಿಕ ಟ್ರಾಫಿಕ್ ಪೊಲೀಸ್ ಪುರಸ್ಕಾರ ನೀಡಲಾಗುತ್ತದೆ.
- ವೈದ್ಯರಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಮಾಡುವ ಇತರ ವರ್ಗವನ್ನು ಗುರುತಿಸಿ ವಿಕ ಆರೋಗ್ಯ ವಾರಿಯರ್ ಪುರಸ್ಕಾರ ನೀಡಲಾಗುತ್ತದೆ.
- ಕೆಲವೊಂದು ತುರ್ತು ಸಂದರ್ಭದಲ್ಲಿ ಸಾರ್ವಜನಿಕರೂ ಜೀವ ರಕ್ಷಕರಾಗಿ ಬರುತ್ತಾರೆ. ಅಂಥವರ ಸಾಹಸ, ಧೈರ್ಯ ಅಪರಿಮಿತ. ಜೀವಗಳನ್ನೇ ರಕ್ಷಿಸಿದ ಇತಿಹಾಸ ಇವರಿಗಿರುತ್ತದೆ. ಇಂಥವರನ್ನು ಗುರುತಿಸಿ ವಿಕ ಆರೋಗ್ಯ ರಕ್ಷಕ ಪುರಸ್ಕಾರ ನೀಡಲಾಗುತ್ತದೆ.
- ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕೆಲಸ ಮಾಡುವ ಶಿಕ್ಷಕರನ್ನು ಗುರುತಿಸಿ ವಿಕ ಟೀಚರ್ ಪುರಸ್ಕಾರ ನೀಡಲಾಗುತ್ತದೆ.
- ಪ್ರಕೃತಿಯನ್ನು ಆರಾಧಿಸಿಕೊಂಡು ಪ್ರಕೃತಿಯ ರಕ್ಷಣೆಗಾಗಿ ಬದುಕನ್ನೇ ಮುಡಿಪಾಗಿಟ್ಟಿರುವ ಪ್ರಕೃತಿ ಸ್ನೇಹಿಯನ್ನು ಗುರುತಿಸಿ ವಿಕ ಪರಿಸರ ಸ್ನೇಹಿ ಪುರಸ್ಕಾರ ನೀಡಲಾಗುತ್ತದೆ.
- ಪ್ರಾಣಿಗಳ ಆರೈಕೆ, ಅವುಗಳಿಗೆ ಆಹಾರ ನೀಡುವ, ನಿಸ್ವಾರ್ಥವಾಗಿ ಪ್ರಾಣಿಗಳ ಬಗ್ಗೆ ಕಾಳಜಿ ತೋರುವವರನ್ನು ಗುರುತಿಸಿ ವಿಕ ಪ್ರಾಣಿ ಪ್ರಿಯ ಪುರಸ್ಕಾರ ನೀಡಲಾಗುತ್ತದೆ.
- ಅನಾಥ ಮಕ್ಕಳಿಗೆ ಆಶ್ರಯ ನೀಡಿ, ಅವರನ್ನು ಸಾಕಿ, ಸಲಹಿ, ಉತ್ತಮ ಶಿಕ್ಷಣ ನೀಡಿ ನಾಗರಿಕರನ್ನಾಗಿ ಮಾಡುವ ವ್ಯಕ್ತಿಗಳು-ಸಂಘ ಸಂಸ್ಥೆಗಳನ್ನು ಗುರುತಿಸಿ ವಿಕ ಅನಾಥ ಮಕ್ಕಳ ರಕ್ಷಕ ಪುರಸ್ಕಾರ ನೀಡಲಾಗುತ್ತದೆ.
- ಸ್ವಚ್ಛತೆಗೆ ಆದ್ಯತೆ ನೀಡುತ್ತಾ, ಊರು, ಕೇರಿ,ನಗರ ಸ್ವಚ್ಛತೆಗೆ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿರುವವರನ್ನು ಗುರುತಿಸಿ ವಿಕ ಕ್ಲೀನ್ ಸಿಟಿ ವಾರಿಯರ್ ಪುರಸ್ಕಾರ ನೀಡಲಾಗುತ್ತದೆ.
- ದಕ್ಷಿಣ ಕನ್ನಡ ಜಿಲ್ಲೆಯೊಳಗಿನ ಯಾವುದೇ ಊರಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಈ ರೀತಿಯ ವನ ಕುಸುಮಗಳು ಇದ್ದಲ್ಲಿ ಅವರ ಬಗ್ಗೆ ವಿವರಗಳನ್ನು ವಿಜಯ ಕರ್ನಾಟಕದ ಕಚೇರಿಗೆ ಲಿಖಿತವಾಗಿ ಅಥವಾ ವಾಟ್ಸ್‌ಆಪ್ ನಂಬರ್: 7899873707ಗೆ ಕಳುಹಿಸಿ. ಅಥವಾ info@vkheroes.com ಗೆ ಮೇಲ್ ಮಾಡಿ. ವಿವರಗಳಿಗೆ ವೆಬ್‌ಸೈಟ್ www.vkheroes.com ಸಂದರ್ಶಿಸಿ ಎಂದು ವಿಜಯ ಕರ್ನಾಟಕ ಪತ್ರಿಕೆಯ ಪ್ರಕಟಣೆ ತಿಳಿಸಿದೆ