NEWS: ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಕೋಪ!! - ದಿನವಿಡೀ ಸುದ್ದಿಯಾದ ಹೇಳಿಕೆಗಳ ಸಮರ

NEWS: ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಕೋಪ!! - ದಿನವಿಡೀ ಸುದ್ದಿಯಾದ ಹೇಳಿಕೆಗಳ ಸಮರ

 

ಸದಾ ಸುದ್ದಿಯಲ್ಲಿರುವ ಎರಡು ಮಹಿಳಾ ಅಧಿಕಾರಿಗಳೀಗ ಸೋಶಿಯಲ್ ಮೀಡಿಯಾವಷ್ಟೇ ಅಲ್ಲ, ತಮ್ಮ ಹೇಳಿಕೆಗಳು ಹಾಗೂ ವರ್ತನೆಗಳಿಂದ ರಾಜ್ಯದಾದ್ಯಂತ ಸುದ್ದಿಯಲ್ಲಿದ್ದಾರೆ. ಸಾಮಾನ್ಯವಾಗಿ ರಾಜಕಾರಣಿಗಳು ಪರಸ್ಪರ ದೋಷಾರೋಪಣೆಯನ್ನು ಮಾಧ್ಯಮಗೋಷ್ಠಿಯಲ್ಲೋ, ಸಭಾ ಕಾರ್ಯಕ್ರಮದಲ್ಲೋ ಮಾಡುತ್ತಾರೆ. ಆದರೆ ಇಲ್ಲಿ ಐಪಿಎಸ್ ಅಧಿಕಾರಿ ರೂಪಾ ಆಗಲಿ, ಐಎಎಸ್ ಅಧಿಕಾರಿ ರೋಹಿಣಿಯಾಗಲೀ, ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಇವರಲ್ಲಿ ರೂಪಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದೀಗ ರೂಪಾ ವಿರುದ್ಧ ಪ್ರಕರಣ ದಾಖಲಿಸುವುದಾಗಿ ರೋಹಿಣಿ ಹೇಳಿರುವ ಟ್ವೀಟ್ ಒಂದು ಸಿಂಧೂರಿ ಫ್ಯಾನ್ಸ್ ಅಕೌಂಟ್ ನಿಂದ ಬಂದಿದೆ.

ರಾಜ್ಯದಲ್ಲಿ ಮಹಿಳಾ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಡುವಿನ ಈ ಜಟಾಪಟಿಗೆ ಮೂಲ ಕಾರಣ ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ. 


 

ರೂಪಾ ದಿವಾಕರ್ ಮೌದ್ಗೀಲ್ (ಡಿ. ರೂಪಾ) ಕರ್ನಾಟಕದ ದಾವಣಗೆರೆಯವರು. ಭಾರತೀಯ ಪೊಲೀಸ್ ಸೇವಾ (ಐಪಿಎಸ್) ಅಧಿಕಾರಿಯಾದ ಕರ್ನಾಟಕದ ಪ್ರಥಮ ಮಹಿಳೆ. ರಾಜಕೀಯ ವ್ಯಕ್ತಿಗಳ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವುದರ ಮೂಲಕ ಗಮನ ಸೆಳೆದವರು. ವೃತ್ತಿಯಲ್ಲಿ 40 ಕ್ಕೂ ಅಧಿಕ ಬಾರಿ ವರ್ಗಾವಣೆಗೊಂಡಿದ್ದಾರೆ. ಪ್ರಸ್ತುತ ಅವರು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಐಜಿಪಿ) ಆಗಿದ್ದಾರೆ. 

 ರೋಹಿಣಿ ಸಿಂಧೂರಿ ತೆಲಂಗಾಣದ ಹೈದರಾಬಾದ್‌ನವರು. ಅವರು ಖಮ್ಮಂ ಜಿಲ್ಲೆಯ ಸತ್ತಪಳ್ಳಿ ತಾಲೂಕಿನ ರುದ್ರಾಕ್ಷಪಲ್ಲಿ ಗ್ರಾಮದವರು. ಹೈದರಾಬಾದ್‌ನಲ್ಲಿ ಎಂಜಿನಿಯರಿಂಗ್ ಪೂರೈಸಿದರು. ಬಳಿಕ ಹಿಮಾಯತ್ ನಗರದ ಆರ್. ಸಿ. ರೆಡ್ಡಿ ಕೋಚಿಂಗ್ ಸೆಂಟರ್‌ನ ಸಿವಿಲ್ ಸರ್ವಿಸ್ ತರಬೇತಿ ಕೇಂದ್ರಕ್ಕೆ ಸೇರಿದರು ಕೇಂದ್ರ ನಾಗರೀಕ ಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಅವರು ದೇಶಕ್ಕೆ 43 ನೇ ಸ್ಥಾನ ಪಡೆದಿದ್ದರು. ಐಎಎಸ್ ಅಧಿಕಾರಿಯಾಗಿ ವಿವಿಧೆಡೆ ಕರ್ತವ್ಯ ಸಲ್ಲಿಸಿದ್ದಾರೆ.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ