CRIME: ದುಬೈಗೆ ಸಾಗಾಟಕ್ಕೆ ಯತ್ನ, ಮಂಗಳೂರು ವಿಮಾನ ನಿಲ್ದಾಣದಲ್ಲಿ 1.69 ಕೋಟಿ ರೂ ವಜ್ರದ ಹರಳು ಪ್ರಯಾಣಿಕನ ಒಳ ಉಡುಪಿನಲ್ಲಿ ಪತ್ತೆ

CRIME: ದುಬೈಗೆ ಸಾಗಾಟಕ್ಕೆ ಯತ್ನ, ಮಂಗಳೂರು ವಿಮಾನ ನಿಲ್ದಾಣದಲ್ಲಿ 1.69 ಕೋಟಿ ರೂ ವಜ್ರದ ಹರಳು ಪ್ರಯಾಣಿಕನ ಒಳ ಉಡುಪಿನಲ್ಲಿ ಪತ್ತೆ

 

 

 

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊನ್ನೆ ಪ್ರಯಾಣಿಕನೊಬ್ಬನಿಂದ ಕಸ್ಟಮ್ಸ್ ಅಧಿಕಾರಿಗಳು 1.69 ಕೋಟಿ ರೂ ಮೌಲ್ಯದ ವಜ್ರದ ಹರಳುಗಳನ್ನು ವಶಪಡಿಸಿಕೊಂಡರು. ಅದನ್ನು ಆತ ಎಲ್ಲಿಟ್ಟಿದ್ದ ಗೊತ್ತಾ? ತನ್ನ ಒಳಉಡುಪಿನಲ್ಲಿ ಪೌಚ್ ಗಳಲ್ಲಿ ಹರಳು ತುಂಬಿಸಿ ಯಾರಿಗೂ ಗೊತ್ತಾಗದಂತೆ ಸಾಗಿಸಲು ಪ್ರಯತ್ನಿಸುತ್ತಿದ್ದ. ಆದರೆ ಕಸ್ಟಮ್ಸ್ ಅಧಿಕಾರಿಗಳ ಕೈಯಲ್ಲಿ ಆತ ಸಿಕ್ಕಿಬಿದ್ದ.

ಈ ಕುರಿತು ಬೆಂಗಳೂರು ಕಸ್ಟಮ್ಸ್ ಇಲಾಖೆ ಟ್ವೀಟ್ ಮಾಡಿದೆ. ಪ್ರಯಾಣಿಕರ ಭದ್ರತಾ ತಪಾಸಣೆ ವೇಳೆ ದುಬೈಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಚೆಕ್ ಮಾಡಿದಾಗ ಕಾಸರಗೋಡು ಮೂಲದ ವ್ಯಕ್ತಿಯ ಕುರಿತು ಅನುಮಾನ ಬಂದಿದೆ. ಬಳಿಕ ಆತನ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ ಪೌಚ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಪ್ರಯಾಣಿಕನನ್ನು ಹೆಚ್ಚಿನ ತನಿಖೆಗಾಗಿ ಸಿಐಎಸ್ಎಫ್ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಎರಡು ಪೌಚ್ಗಳಲ್ಲಿ ಒಟ್ಟು 306.21 ಕ್ಯಾರೆಟ್ಗಳಷ್ಟು ತೂಕದ ವಿವಿಧ ಗಾತ್ರದ ವಜ್ರಗಳೊಂದಿಗೆ 13 ಚಿಕ್ಕ ಪ್ಯಾಕೆಟ್ಗಳು ಕಂಡುಬಂದಿದ್ದು, ಇದರ ಮೌಲ್ಯ ರೂ.1.69 ಕೋಟಿಯಾಗಿದೆ. ಪ್ರಯಾಣಿಕನನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆಗಳು ಪ್ರಗತಿಯಲ್ಲಿವೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.

ವಿಮಾನ ನಿಲ್ದಾಣದಲ್ಲಿ ಒಳಉಡುಪಿನಲ್ಲಿ ಚಿನ್ನವನ್ನು ಬಚ್ಚಿಡುವುದು, ಗುದದ್ವಾರದಲ್ಲಿ ಅಡಗಿಸಿಡುವುದು, ಪೌಡರ್ ಮಾಡಿ ಯಾವ್ಯಾವುದೋ ಆಟಿಕೆಗಳಲ್ಲಿ ಹುದುಗಿಸಿಡುವುದು ಹೀಗೆ ನಾನಾ ಮೂಲದಲ್ಲಿ ಸ್ಮಗ್ಲಿಂಗ್ ಮಾಡುವ ಪ್ರಯಾಣಿಕರು ಕಂಡುಬರುತ್ತಾರೆ. ಮೊನ್ನೆ ಪತ್ತೆಯಾದ ಪ್ರಕರಣ ಸುದೀರ್ಘ ಅವಧಿಯ ಬಳಿಕ ಪತ್ತೆಯಾದ ಪ್ರಕರಣವಾಗಿದೆ.

 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ