CRIME: 2000 ರೂ ನೋಟು ಬದ್ಲಾಯಿಸ್ತೀವಿ ಎಂದು ಟೋಪಿ ಹಾಕುವವರಿದ್ದಾರೆ

CRIME: 2000 ರೂ ನೋಟು ಬದ್ಲಾಯಿಸ್ತೀವಿ ಎಂದು ಟೋಪಿ ಹಾಕುವವರಿದ್ದಾರೆ


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ರೂ ನೋಟು ಬದಲಾವಣೆಗೆ ಕಾಲಾವಕಾಶ ನೀಡಿದೆ. ಆದರೆ ಇದನ್ನು ಅರಿಯದವರ ಮುಗ್ಧತನವನ್ನು ಬಂಡವಾಳ ಮಾಡುವವರೂ ಇದ್ದಾರೆ.
ಇಂಥದ್ದೊಂದು ಪ್ರಕರಣ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯಿತು.

ಎರಡು ಸಾವಿರ ಮುಖಬೆಲೆಯ ಬದಲಾವಣೆ ನಮಗೆ ಸಾಧ್ಯವಾಗಿಲ್ಲ, ನೀವು ನಮಗೆ ಐದು ಲಕ್ಷ ರೂಪಾಯಿ ನೀಡಿ ನಿಮಗೆ ನಾವು ಎರಡು ಸಾವಿರ ಮುಖಬೆಲೆಯ ಆರು ಲಕ್ಷ ರೂಪಾಯಿ ನೀಡುತ್ತೇನೆ ಎಂದು ಹೇಳುವ ಜಾಲವೊಂದು ಕಾಗವಾಡ ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿದೆ.

ಇಂಥ ಸುಳಿವರಿತ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಆರೋಪಿತರಾದ ಸಾಗರ ಜಾಧವ್, ಆರೀಫ್ ಸಾಗರ, ಲಕ್ಷ್ಮಣ್ ನಾಯಕ್ ರವರನ್ನು ಪೊಲೀಸರು ಬಂಧನ ಮಾಡಿದ್ದಾರೆ. 
ಈ ಮೂವರು ಆರೋಪಿಗಳು ಮಹಾರಾಷ್ಟ್ರದ ಮೂಲದ ಸಮೀರ್ ಭೋಷಲೇ ಅವರನ್ನು ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಕರಿಸಿಕೊಂಡು ವಂಚನೆ ಮಾಡಿದ್ದರು

, ಈ ಕುರಿತು ಸಮೀರ್ ಭೋಂಸ್ಲೆ ಕಾಗವಾಡ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದರು.
ಈ ಮೂರು ಜನ ಆರೋಪಿತರು ನಮಗೆ ಎರಡು ಸಾವಿರ ಮುಖಬೆಲೆಯ ನೋಟುಗಳು ಬದಲಾವಣೆ ಸಾಧ್ಯ ಆಗುತ್ತಿಲ್ಲ, ನಾವು ನಿಮಗೆ ಎರಡು ಸಾವಿರ ಮುಖಬೆಲೆಯ 6 ಲಕ್ಷ ರೂಪಾಯಿ ಕೊಡ್ತೀವಿ ನೀವು ನಮಗೆ ಐದು ನೂರು ಮುಖಬೆಲೆಯ 5 ಲಕ್ಷ ನೀಡಿ ಎಂದು ಕೆಲವರನ್ನು ನಂಬಿಸಿ ಮೋಸ ಮಾಡುವ ಜಾಲವೊಂದರ ಸದಸ್ಯರು.
ಮಹಾರಾಷ್ಟ್ರ ಪೋಲಿಸ್ ಇಲಾಖೆಯ ಸಿಬ್ಬಂದಿಯಾದ ಸಾಗರ ಸದಾಶಿವ ಜಾಧವ್ ಜೊತೆಯಾಗಿ ಅವನ ಇನ್ನಿಬ್ಬರು ಸ್ನೇಹಿತರ ಜೊತೆ ಈ ವಂಚನೆ ಪ್ರಕರಣ ನಡೆಸುತ್ತಿದ್ದರು ಎನ್ನಲಾಗಿದೆ.
 ಹಣ ಬದಲಾವಣೆ ಸಮಯದಲ್ಲಿ ಪೊಲೀಸ್ರು ಬಂದು ಎಂದು ಅಲ್ಲಿಂದ ಕಾಲ್ಕೆತ್ತು ವಂಚನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ, ಜೊತೆಗೆ ಅಮಾಯಕರನ್ನು ನಂಬಿಸಲು ಮಕ್ಕಳು ಆಟಿಕೆಗೆ ಬಳಸುವ ಹಣದ ಜೊತೆಗೆ ಕೆಲವು ಅಸಲಿ ಹಣವನ್ನು ಸೇರಿಸಿ ನಂಬಿಸುತ್ತಿದ್ದರು.
 ತಮಗೆ ಹಣ ಸಿಗುತ್ತಿದ್ದಂತೆ ಪೊಲೀಸ್ರು ಬಂದರು ಎಂದು ಗಾಬರಿಗೊಳಿಸಿ ಪರಾರಿವಾಗುತ್ತಿದ್ದರು, ಇದೇ ರೀತಿಯಲ್ಲಿ ಹಿಂದೆ ಕೂಡ ಈ ರೀತಿ ಮೂವರಿಗೆ ವಂಚನೆ ಮಾಡಿದ್ದಾರೆ ಎಂದು ಬೆಳಗಾವಿ ಎಸ್ ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ, 

೨೦೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು  ಯಾವುದೇ ಗೊಂದಲವಿಲ್ಲದೆ ನೇರವಾಗಿ ನೀವು ಬ್ಯಾಂಕುಗಳಿಗೆ ಹೋಗಿ ಹಣ ಬದಲಾವಣೆ ಮಾಡಿಕೊಂಡು ಬರಬೇಕೆಂದು, ಯಾವುದೇ ವದಂತಿಗಳಿಗೆ ಕಿವಿಗೊಡದೆ ನಿಮ್ಮ ಹಣವನ್ನು ನೀವು ಬದಲಾವಣೆ ಮಾಡಿಕೊಳ್ಳಿ ಎಂದು ಸಾರ್ವಜನಿಕರಿಗೆ ಬೆಳಗಾವಿ ಎಸ್ಪಿ ಡಾ ಸಂಜೀವ ಪಾಟೀಲ್ ಮನವಿ ನೀಡಿದ್ದಾರೆ ಇದೇ ರೀತಿ ಎಲ್ಲಾದರೂ ವಂಚನೆ ಮಾಡುತ್ತಿದ್ದರೆ 112 ಗೆ ಕರೆ ಮಾಡುವಂತೆ ತಿಳಿಸಿದ್ದಾರೆ.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ