MANGALORE:  ಮಂಗಳೂರು ಸಿಟಿ ಪೊಲೀಸರ ಸಭೆ ನಡೆಸಿದ ಗೃಹಸಚಿವ ಡಾ. ಪರಮೇಶ್ವರ್: ಡ್ರಗ್ಸ್ ದಂಧೆ, ನೈತಿಕ ಪೊಲೀಸ್ ಪ್ರಕರಣ ಮಟ್ಟಹಾಕಲು ಖಡಕ್ ಸೂಚನೆ

MANGALORE: ಮಂಗಳೂರು ಸಿಟಿ ಪೊಲೀಸರ ಸಭೆ ನಡೆಸಿದ ಗೃಹಸಚಿವ ಡಾ. ಪರಮೇಶ್ವರ್: ಡ್ರಗ್ಸ್ ದಂಧೆ, ನೈತಿಕ ಪೊಲೀಸ್ ಪ್ರಕರಣ ಮಟ್ಟಹಾಕಲು ಖಡಕ್ ಸೂಚನೆ

 

ಮಂಗಳೂರಿಗೆ ಆಗಮಿಸಿದ ಗೃಹಸಚಿವ ಡಾ. ಜಿ.ಪರಮೇಶ್ವರ್ ಅವರು, ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈತಿಕ ಪೊಲೀಸ್ ಗಿರಿ ತಡೆಯಲು ಆ?ಯಂಟಿ ಕಮ್ಯುನಲ್ ವಿಂಗ್ ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ಇದೇ ವೇಳೆ ಡ್ರಗ್ಸ್ ಮಟ್ಟ ಹಾಕಲು ಅಭಿಯಾನವನ್ನು ನಡೆಸುವುದಾಗಿ ತಿಳಿಸಿದರು.

ಪಶ್ಚಿಮ ವಲಯ ಐಜಿಪಿ ವ್ಯಾಪ್ತಿಯ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ನೈತಿಕ ಪೊಲೀಸ್ ಗಿರಿ ತಡೆಯಲು ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ನೂತನ ಪಡೆಯಾದ ಆ?ಯಂಟಿ ಕಮ್ಯೂನಲ್ ವಿಂಗ್ ಸ್ಥಾಪಿಸುವ ಅಗತ್ಯವಿದೆ ಎಂದು ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.

ಯುವಕರಲ್ಲಿ ಡ್ರಗ್ಸ್ ಚಟ ಜಾಸ್ತಿಯಾಗಿದೆ. ಅದನ್ನು ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ.ಇದಕ್ಕಾಗಿ ವಿಶೇಷ ಅಭಿಯಾನ ಮಾಡುತ್ತೇವೆ. ಡ್ರಗ್  ಪೆಡ್ಲರ್, ಡ್ರಗ್  ಉಪಯೋಗ ಮಾಡುವವರನ್ನು ಹತ್ತಿಕ್ಕುವ ಕೆಲಸ ಮಾಡುತ್ತೇವೆ. ಆಗಷ್ಟ್ ೧೫ ತಾರೀಕಿನೊಳಗೆ ಈ ಭಾಗದಲ್ಲಿ ಡ್ರಗ್ಸ್ ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಸೂಚಿಸಿದ್ದೇನೆ.  ಡ್ರಗ್ಸ್  ಸರಬರಾಜು ಮಾಡುವವರು, ಉಪಯೋಗ ಮಾಡುವವರಿಗೆ ಸೂಕ್ತ ಕ್ರಮಕ್ಕೆ ಸೂಚನೆ ಕೊಟ್ಟಿದ್ದೇನೆ ಎಂದರು.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ