ALERT: ಮುಂದಿನ ನಾಲ್ಕು ದಿನ ಕಡಲತೀರವಾಸಿಗಳಿಗೆ ಅಲರ್ಟ್ ಮೆಸೇಜ್ ನೀಡಿದ ಹವಾಮಾನ ಇಲಾಖೆ
ಜೂನ್ 6ರಂದು 55 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದರೆ, 7ರಿಂದ 9ರವರೆಗೆ ಗಂಟೆಗೆ 65 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಆದಾಗ್ಯೂ ಇದು ಮುನ್ಸೂಚನೆ ಮಾತ್ರವಾಗಿದ್ದು, ಬದಲಾವಣೆ ಇದ್ದೇ ಇರುತ್ತದೆ. ಆದರೆ ಮೀನುಗಾರರು ಈ ದಿನಗಳಲ್ಲಿ ಕಡಲಿಗೆ ಇಳಿಯದಂತೆ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ಇದರಿಂದಾಗಿ ಸಮುದ್ರದ ಅಲೆಗಳು ಜಾಸ್ತಿ ಇರುವ ಸಂಭವನೀಯತೆಯೂ ಇದ್ದು, ಸಮುದ್ರವಿಹಾರಿಗಳು ಸಂಚರಿಸದೇ ಇರುವುದು ಒಳಿತು. ವೇಗವಾದ ಅಲೆಗಳು ಅಪ್ಪಳಿಸುವ ಸಾಧ್ಯತೆಯನ್ನು ಇಲಾಖೆ ನೀಡಿದೆ.
ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ, ಮಲ್ಪೆ, ಮುರುಡೇಶ್ವರ, ಕುಮಟಾ, ತದಡಿ, ಬೇಲಕೇರಿ (ಆವರ್ಸಾ)ದಲ್ಲಿರುವ ಬಂದರು ಪ್ರದೇಶಗಳಿಗೂ ಈಗಾಗೇ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಗಿದೆ.
(ಹವಾಮಾನ ಇಲಾಖೆ ಟ್ವಿಟರ್ ಸಂದೇಶ
ಆಗ್ನೇಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಹವಾಮಾನ ಎಚ್ಚರಿಕೆ. #Fishermen warning from @Indiametdept
— Karnataka State Natural Disaster Monitoring Centre (@KarnatakaSNDMC) June 6, 2023
due to formation of #Depression in southeast Arabian Sea pic.twitter.com/oQqTB3lBUU