ELECTION: ಮಹಿಳೆಗೆ ದೊರಕುವುದೇ ದೇಶದ ಚುಕ್ಕಾಣಿ? ತುಮಕೂರಿನ ಯಶವಂತ ಗುರೂಜಿ ಭವಿಷ್ಯ ಹೇಳಿದ್ದು ಹೀಗೆ…

ELECTION: ಮಹಿಳೆಗೆ ದೊರಕುವುದೇ ದೇಶದ ಚುಕ್ಕಾಣಿ? ತುಮಕೂರಿನ ಯಶವಂತ ಗುರೂಜಿ ಭವಿಷ್ಯ ಹೇಳಿದ್ದು ಹೀಗೆ…

 


ಮುಂದಿನ ಪ್ರಧಾನಿ ಯಾರಾಗಬಹುದು ಎಂಬ ಚರ್ಚೆಗಳು ಈಗಾಗಲೇ ಆರಂಭಗೊಂಡಿವೆ. ನರೇಂದ್ರ ಮೋದಿ ಅವರೇ ಹ್ಯಾಟ್ರಿಕ್ ಸಾಧಿಸಲಿದ್ದಾರೆ ಎಂದು ಬಿಜೆಪಿಯವರು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಿದ್ದರೆ, ತೃತೀಯ ರಂಗ ಎನಿಸಿಕೊಂಡ ಪಾರ್ಟಿಗಳಲ್ಲಿ ಬಹುತೇಕ ಪಕ್ಷಗಳು ಕಾಂಗ್ರೆಸ್ ಜೊತೆ ಸೇರಿ ಐ.ಎನ್.ಡಿ.ಐ.ಎ. ಎಂಬ ಒಕ್ಕೂಟವನ್ನು ಸ್ಥಾಪಿಸಿದ್ದು ಗೊತ್ತೇ ಇದೆ. ಇವರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಕಾಂಗ್ರೆಸ್ ಬಯಸಿದರೆ, ಉಳಿದ ಪಕ್ಷಗಳಲ್ಲಿ ನಾನೇ ಪ್ರಧಾನಮಂತ್ರಿ ಯಾಕೆ ಆಗಬಾರದು ಎಂಬ ಧೋರಣೆಯಲ್ಲಿ ಅವುಗಳ ನೇತಾರರು ಇದ್ದಾರೆ. ಕೆಲವೇ ತಿಂಗಳುಗಳು ಉಳಿದಿರುವ ಈ ಹೊತ್ತಿನಲ್ಲೇ ಕಳೆದ ಫೆಬ್ರವರಿಯಲ್ಲಿ ನೋಡ್ತಾ ಇರಿ, ಕಾಂಗ್ರೆಸ್ ಅಧಿಕಾರಕ್ಕೆ ಬರ್ತದೆ ಎಂದು ಇನ್ನೂರು ಪರ್ಸೆಂಟ್ ಗ್ಯಾರಂಟಿ ಹೇಳಿ ಅಚ್ಚರಿ ಮೂಡಿಸಿದ್ದ ತುಮಕೂರಿನ ಯಶವಂತ ಗುರೂಜಿ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಇದು ಸದ್ಯಕ್ಕೆ ಕರ್ನಾಟಕದ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ವಿಷಯವಾಗಿತ್ತು.

ತುಮಕೂರಿನ ನೊಣವಿನಕೆರೆಯಲ್ಲಿ ಯಶವಂತ ಗುರೂಜಿ ಮಾತನಾಡಿ, ಮುಂದಿನ ಬಾರಿ ದೇಶದ ಚುಕ್ಕಾಣಿ ಮಹಿಳೆಯ ಕೈಗೆ ಹೋಗಲಿದೆ. ಮಹಿಳೆ ದೇಶವನ್ನು ಆಳ್ತಾಳೆ ಎಂದು ಹೇಳಿದ್ದರು. ಯಶವಂತ ಗುರೂಜಿ ಹೇಳಿರುವ ಭವಿಷ್ಯದ ಕುರಿತ ಮಾತುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವು ಸುದ್ದಿವಾಹಿನಿಗಳು ಇದನ್ನು ಪ್ರಸಾರ ಮಾಡಿವೆ.

ಕಾಲಜ್ಞಾನ ಭವಿಷ್ಯವಾಣಿ ಪ್ರಕಾರ ಶಿವರಾತ್ರಿ ನಂತರ ರಾಷ್ಟ್ರರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಸ್ತ್ರೀಯೊಬ್ಬರು ಆಳ್ವಿಕೆ ಮಾಡುತ್ತಾರೆ ತಾನು ಕಾಲಜ್ಞಾನ ಭವಿಷ್ಯವಾಣಿ ಪ್ರಕಾರ ಹೇಳುತ್ತಿದ್ದು, ಶಿವರಾತ್ರಿ ಬಳಿಕ ಮಿತ್ರಪಕ್ಷಗಳ ಸಹಾಯದಿಂದ ಒಂದು ಪಕ್ಷ ಅಧಿಕಾರಕ್ಕೆ ಬಂದು, ಸ್ತ್ರೀಯೊಬ್ಬರು ಆಡಳಿತ ಮಾಡುತ್ತಾರೆ. ಮಕರ ಸಂಕ್ರಾಂತಿ ಹಬ್ಬದ ದಿನ ತಾನು ತಿಳಿಸುವೆ ಎಂದು ಡಾ. ಯಶವಂತ ಗುರೂಜಿ ಮಾಧ್ಯಮಗಳಿಗೆ ಹೇಳಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಮೂರು ಪಕ್ಷಗಳೂ ಯುದ್ಧಗಳೂ ಮಾಡುತ್ತವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಫೆಬ್ರವರಿಯಲ್ಲಿ ಅವರು ಮಾಧ್ಯಮಗಳಿಗೆ ತಿಳಿಸಿದ್ದು, ನೂರಕ್ಕೆ ಇನ್ನೂರು ಪರ್ಸೆಂಟ್ ಅಧಿಕಾರಕ್ಕೆ ಬರುವುದರಲ್ಲಿ ಡೌಟೇ ಇಲ್ಲ. ಪುರಾತನವಾದ ಕಾಲಜ್ಞಾನದ ಆಧಾರದಲ್ಲಿ ನಾನು ಹೇಳಿದ ಭವಿಷ್ಯವಿದು ಎಂದು ಅವರು ಹೇಳಿದ್ದರು.

ಇನ್ನೊಂದು ವಿಷಯವೆಂದರೆ, ಶಿವರಾತ್ರಿಗೂ ಮುನ್ನ ಚುನಾವಣೆ ಆದರೆ, ಏನಾದೀತು, ಅವಧಿಪೂರ್ವ ಚುನಾವಣೆ ನಡೆದರೆ, ಮತ್ತೆ ಮೋದಿ ಪ್ರಧಾನಿ ಆಗಬಹುದೇ ಎಂಬ ಚರ್ಚೆಗಳೂ ಚಾಲ್ತಿಯಲ್ಲಿವೆ. ಒಟ್ಟಾರೆಯಾಗಿ ಚುನಾವಣೆ ಕುರಿತು ರಾಜಕೀಯ ಪಂಡಿತರ ಲೆಕ್ಕಾಚಾರಗಳೊಂದಿಗೆ ಜ್ಯೋತಿಷಿಗಳೂ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದಿಡುತ್ತಾ ಅಚ್ಚರಿಯ ಹೇಳಿಕೆಗಳನ್ನು ನೀಡುತ್ತಿರುವುದು ಕುತೂಹಲಕಾರಿ. ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಕೆಲ ವಿಡಿಯೋ ಲಿಂಕ್ ಗಳು ಇಲ್ಲಿವೆ ನೋಡಿ. ಮೊದಲನೆಯದ್ದು ಆರು ತಿಂಗಳ ಹಿಂದೆ ಯಶವಂತ ಗುರೂಜಿ ನೀಡಿದ ಹೇಳಿಕೆ. ಎರಡನೆಯದ್ದು ಈಗ ನೀಡಿದ ಹೇಳಿಕೆ.




Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ