-->
Accident: ಪಟಾಕಿ ಅಂಗಡಿ ಗೋಡೌನ್ ನಲ್ಲಿ ಅನಾಹುತ: 11 ಮಂದಿ ಸಜೀವ ದಹನ

Accident: ಪಟಾಕಿ ಅಂಗಡಿ ಗೋಡೌನ್ ನಲ್ಲಿ ಅನಾಹುತ: 11 ಮಂದಿ ಸಜೀವ ದಹನ

 

BREAKING: ಅತ್ತಿಬೆಲೆಯ ಪಟಾಕಿ ಅಂಗಡಿಯ ಗೋಡೌನ್ ನಲ್ಲಿ  ಅಗ್ನಿದುರಂತದಲ್ಲಿ ಇದುವರೆಗೂ 11 ಮಂದಿ ಸಾವನ್ನಪ್ಪಿದ್ದಾರೆ. 

 ದೀಪಾವಳಿ ಹಬ್ಬಕ್ಕೆಂದು ಶಿವಕಾಶಿಯಿಂದ ANEKAL ಆನೆಕಲ್ ಸಮೀಪದ ಅತ್ತಿಬೆಲೆಯ ಅಂಗಡಿಯೊಂದಕ್ಕೆ ಪಟಾಕಿ ಲೋಡ್‌ ಮಾಡುವ ಸಂದರ್ಭ ಈ ಅನಾಹುತ ಸಂಭವಿಸಿದೆ. ಗೋಡೌನ್ ನಲ್ಲಿ 20 ಮಂದಿ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಘಟನೆಯಲ್ಲಿ ಬೆಂಕಿ ಹೊತ್ತಿಕೊಂಡು ಇಡೀ ಗೋಡೌನ್ ಸುಟ್ಟುಕರಕಲಾಗಿದೆ.  ಇದುವರೆಗೂ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.  

ಆನೇಕಲ್ ತಾಲೂಕಿನ ಅತ್ತಿಬೆಲೆಯ ಅಂಗಂಡಿಯೊಂದಕ್ಕೆ ಮಧ್ಯಾಹ್ನವಷ್ಟೇ ಪಟಾಕಿಯನ್ನು ತಂದು ಗೋಡೋನ್‌ ನಲ್ಲಿ ಇಳಿಸಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಈ ದರ್ಘಟನೆ ನಡೆದಿದೆ.  ಆ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳ ನಿಂತ್ರಣಕ್ಕೆ ತರಲು ಏಳು ಅಗ್ನಿಶಾಮಕ ವಾಹನಗಳನ್ನು ಬಳಸಿಕೊಂಡು ಹರಸಾಹಸ ಪಡಲಾಯಿತು. 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ