LOKAYUKTHA RAID: ಲೋಕಾಯುಕ್ತ ದಾಳಿ: ಲಂಚ ಸ್ವೀಕಾರ ಪ್ರಕರಣದಲ್ಲಿ ಸಿಲುಕಿದ ಕೃಷಿ ಅಧಿಕಾರಿ

LOKAYUKTHA RAID: ಲೋಕಾಯುಕ್ತ ದಾಳಿ: ಲಂಚ ಸ್ವೀಕಾರ ಪ್ರಕರಣದಲ್ಲಿ ಸಿಲುಕಿದ ಕೃಷಿ ಅಧಿಕಾರಿ

 


ಮಂಗಳೂರು: ಒಂದು ಲಕ್ಷ ರೂ ಲಂಚನ ಹಣವನ್ನು ಪಡೆಯುತ್ತಿರುವಾಗಲೇ ಮಂಗಳೂರು ವಿಭಾಗದ ಉಪಕೃಷಿ ನಿರ್ದೇಶಕಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಉಪಕೃಷಿ ನಿರ್ದೇಶಕಿ ಭಾರತಮ್ಮ ಅಧಿಕಾರಿ. ನಿವೃತ್ತ ವಲಯ ಕೃಷಿ ಅರಣ್ಯಾಧಿಕಾರಿ ಪರಮೇಶ್ ಎನ್.ಪಿ. ನೀಡಿದ ದೂರಿನಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ವಲಯ ಅರಣ್ಯಾಧಿಕಾರಿಯಾಗಿ ನಿವೃತ್ತರಾಗಿದ್ದ ಪರಮೇಶ್ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರುದಾರರಾದ ಪರಮೇಶ್ ಎನ್.ಪಿ. ಅವರು ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿಯಾಗಿದ್ದು, ನಿಯೋಜನೆ ಮೇರೆಗೆ ಕರ್ನಾಟಕ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿ 2023ರ ಆಗಸ್ಟ್ 31ರಂದು ನಿವೃತ್ತಿ ಹೊಂದಿದ್ದರು. ಅವರು ನೀಡಿದ ದೂರಿನ ವಿವರ ಹೀಗಿದೆ.

ತಾನು ಕರ್ತವ್ಯ ನಿರ್ವಹಿಸುತ್ತಿರುವ ಸಮಯ, 2022-23ನೇ ಮತ್ತು 2023-24ನೇ ಸಾಲಿನಲ್ಲಿ ಕೃಷಿ ಇಲಾಖೆ ಅಧೀನದಲ್ಲಿರುವ ಜಲಾನಯನ ಅಭಿವೃದ್ಧಿ ವಿಭಾಗದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ WDC 2.0 ಯೋಜನೆಯಡಿ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು, ಸಜೀಪಮೂಡ, ಸಜೀಪನಡು, ಸಜೀಪಪಡು, ಕುರ್ನಾಡು, ನರಿಂಗಾನ, ಬಾಳೆಪುಣಿ ಮತ್ತು ಮಂಜನಾಡಿ ಗ್ರಾಮಗಳ ಸಾರ್ವಜನಿಕರಿಗೆ ಸರಕಾರದ ವತಿಯಿಂದ ಸುಮಾರು 50 ಲಕ್ಷ ರೂಗಳ ಮೌಲ್ಯದ ವಿವಿಧ ಜಾತಿಯ ಅರಣ್ಯ ಮತ್ತು ತೋಟಗಾರಿಕಾ ಸಸಿಗಳನ್ನು ಉಚಿತವಾಗಿ ಸರಬರಾಜು ಮತ್ತು ನಾಟಿ ಕಾಮಗಾರಿ ಮಾಡಲಾಗಿದೆ. ತೋಟಗಾರಿಕಾ ಸಸಿಗಳನ್ನು ಕಣ್ಣನ್ ನರ್ಸರಿ ಮಾಲೀಕರಾದ ಧೋರಿ, ಶಬರೀಶ್ ನರ್ಸರಿಯ ಭೈರೇಗೌಡ ಮುಂತಾದವರಿಂದ ಪಡೆದು, ಸಾರ್ವಜನಿಕರಿಗೆ ಸರಬರಾಜು ಮಾಡಿ ನಾಟಿ ಕಾಮಗಾರಿ ಮಾಡಿಸಲಾಗಿದೆ, ನರ್ಸರಿ ಗಿಡಗಳನ್ನು ಮಾಲೀಕರಿಂದ ಪಡೆದು, ಅವರಿಗೆ ನೀಡಬೇಕಾದ ಹಣ 18 ಲಕ್ಷ ರೂಗಳನ್ನು ಅರಣ್ಯ ಗುತ್ತಿಗೆದಾರರಿಂದ ನಾಟಿ ಮಾಡಿಸಿದ ಬಾಬ್ತು ಅಂದಾಜು ಬಾಬ್ತು 32 ಲಕ್ಷ ರೂ ಹಣವನ್ನು ಬಾಕಿ ಇರಿಸಿ, ಸಸಿಗಳನ್ನು ಮುಂಗಡವಾಗಿ ಪಡೆದು ನಾಟಿ ಮಾಡಲಾಗಿದೆ. ಈ ಮಾಲೀಕರಿಗೆ ಅರಣ್ಯ ಗುತ್ತಿಗೆದಾರರಿಗೆ ಸಸಿಗಳನ್ನು ಪೂರೈಸಿದ ಹಾಗೂ ನಾಟಿ ಮಾಡಿದ ಬಾಬ್ತು ಸುಮಾರು 50 ಲಕ್ಷ ರೂಗಳು ಸರಕಾರದಿಂದ ಬರಲು ಬಾಕಿ ಇದ್ದು, ಈ ಹಣವನ್ನು ಒದಗಿಸುವಂತೆ ಮಾಲೀಕರು, ಗುತ್ತಿಗೆದಾರರು ತನ್ನಲ್ಲಿ ಆಗಾಗ್ಗೆ ಕೇಳುತ್ತಿದ್ದು, ಮಾಲೀಕರು, ಗುತ್ತಿಗೆದಾರರ ಬಿಲ್ ಸುಮಾರು 50 ಲಕ್ಷ ರೂಗಳನ್ನು ಪಾವತಿಸುವಂತೆ ಬಿಲ್ ಪಾವತಿ ಮಾಡುವ ಅಧಿಕಾರಿಯಾದ ಉಪಕೃಷಿ ನಿರ್ದೇಶಕಿ ಭಾರತಮ್ಮ ಅವರ ಬಳಿ ತಾನು ಅಕ್ಟೋಬರ್ 4ರಂದು ಭೇಟಿಯಾಗಿ ಕೇಳಿಕೊಂಡಿದ್ದೆ. ಬಿಲ್ ಪಾವತಿಯಾಗಬೇಕಾದರೆ, ಬಿಲ್ ಮೊತ್ತದ ಶೇ.15 ಹಣವನ್ನು ಮುಂಗಡವಾಗಿ ತನಗೆ ಲಂಚದ ರೂಪದಲ್ಲಿ ನೀಡಬೇಕು, ಇಲ್ಲವಾದರೆ, ಬಿಲ್ ಪಾವತಿ ಮಾಡುವುದಿಲ್ಲ ಎಂದಿದ್ದಾಗಿ ತಿಳಿಸಿದ್ದಾರೆ.

ಮತ್ತೊಮ್ಮೆ ತಾನು ಮಂಗಳೂರು ಉಪ ಕೃಷಿ ನಿರ್ದೇಶಕರ ಬಳಿ ಹೋಗಿ ಮಂಗಳೂರು ಉಪಕೃಷಿ ನಿರ್ದೇಶಕರಾದ ಭಾರತಮ್ಮ ಅವರ ಚೇಂಬರ್ ಗೆ ಹೋಗಿ ಸರಕಾರದಿಂದ ಪಾವತಿಯಾಗಬೇಕಾದ ಬಿಲ್ ಬಗ್ಗೆ ಮಾತನಾಡಿದಾಗ 1 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಂದರ್ಭ ಭಾರತಮ್ಮ ಲಂಚ ಸ್ವೀಕರಿಸುತ್ತಿದ್ದಾಗ ಆರೋಪಿಯನ್ನು ಲೋಕಾಯುಕ್ತ ದಾಳಿ ಮಾಡಿ ಲಂಚದ ಹಣ ವಶಪಡಿಸಿಕೊಂಡಿದೆ.


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ