DEATH: ಮಂಗಳೂರು: ಪಣಂಬೂರು ಸಮುದ್ರ ಕಿನಾರೆಯಲ್ಲಿ ಬೆಂಗಳೂರು ಮೂಲದ ಇಬ್ಬರ ಮೃತದೇಹ ಪತ್ತೆ -
Thursday, October 19, 2023
ಮಂಗಳೂರು: ಇಲ್ಲಿನ ಪಣಂಬೂರು ಕಡಲ ತೀರದಲ್ಲಿ
ಬೆಂಗಳೂರು ಮೂಲದ ಇಬ್ಬರು ಮಧ್ಯವಯಸ್ಕ ಪುರುಷ ಹಾಗೂ ಮಹಿಳೆ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿರುವ
ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಇವರಿಬ್ಬರ ನಡುವಿನ ಸಂಬಂಧವೇನು ಎಂಬ ಮಾಹಿತಿಯಿಲ್ಲ. ಸಂಬಂಧಿಕರು ಸುದ್ದಿ ಕೇಳಿ
ಆತಂಕಕೊಳಗಾಗಿದ್ದು, ಮಂಗಳೂರಿಗೆ ಬರುತ್ತಿದ್ದಾರೆ. ಮೊಬೈಲ್ ಸಮುದ್ರ ದಂಡೆಯಲ್ಲಿ ಪತ್ತೆಯಾಗಿದ್ದರಿಂದ
ಪಣಂಬೂರು ಪೊಲೀಸರು ಸಂಬಂಧಿಕರನ್ನು ಸಂಪರ್ಕಿಸಿದ್ದಾರೆ. ಬೆಳಗ್ಗೆ ಬೇಗ ಆಗಿದ್ದರಿಂದ ಪಣಂಬೂರು ತೀರದಲ್ಲಿ
ಹೆಚ್ಚು ಜನ ಇರಲಿಲ್ಲ. ಇಬ್ಬರ ಮೃತದೇಹಗಳನ್ನು ಸ್ಥಳೀಯರು ಮೇಲೆತ್ತಿದ್ದು ಆಸ್ಪತ್ರೆಯ ಶವಾಗಾರದಲ್ಲಿ
ಇಡಲಾಗಿದೆ.