ELEPHENT: ಸುಳ್ಯ  ಕೇರಳ ಗಡಿಭಾಗದಲ್ಲಿ ಮತ್ತೆ ಒಂಟಿ ಸಲಗ ದಾಳಿ

ELEPHENT: ಸುಳ್ಯ ಕೇರಳ ಗಡಿಭಾಗದಲ್ಲಿ ಮತ್ತೆ ಒಂಟಿ ಸಲಗ ದಾಳಿ

 

ಸುಳ್ಯ ಕೇರಳ ಗಡಿಭಾಗ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗವು  ಮುಂಜಾನೆ ಸ್ಥಳೀಯ ತೋಟಗಳಿಗೆ ಲಗ್ಗೆ ಇಟ್ಟಿದೆ.
ಕುಮಾರ್ ಪೆರ್ನಾಜೆ ಅವರ  ಒಂದು ತೆಂಗಿನ ಮರ ಎರಡು ಅಡಿಕೆ ಮರ ಮೂರು ಬಾಳೆ ದೀವಿ ಹಲಸು ಮರದ ಸಿಪ್ಪೆಗಳನ್ನೆಬ್ಬಿಸಿ ತಿಂದು ಹಲವು ಬೈನೇ ಮರಗಳನ್ನು ನಾಶ ಮಾಡಿ ಕೆರೆಯಲ್ಲಿ ಈಜಾಡಿದೆ. ಸಮೀಪದ ರಾಘವೇಂದ್ರ ಭಟ್ರ ತೋಟ ದಲ್ಲೂ ಮೂರು ಬಾಳೆ ಗಿಡಗಳನ್ನು ನಾಶ ಮಾಡಿದೆ
ಈಗಾಗಲೇ ಮಂಡೆಕೋಲು ಮೂರೂರು ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ  ಒಂಟಿ ಸಲಗ ಒಂದು ಗುಂಪಿನಿಂದ ಬೇರ್ಪಟ್ಟು ಕನಕಮಜಲು ಮುಗೇರಿನಿಂದ ಪೆರ್ನಾಜೆಗೆ ಬಂದು ನೂಜಿಬೈಲು
ತನಕ ಹಾನಿಗೊಳಿಸಿದೆ. ಅರಣ್ಯ ಇಲಾಖೆಯವರು ರಾತ್ರಿ ಸುತ್ತುವರಿಯುತ್ತಿದ್ದರೂ ಕೃಷಿ ಹಾನಿ ಮಾಡುತ್ತಲೇ ಇದೆ ಇನ್ನಾದರೂ ಪ್ರಾಣ ಹಾನಿಯಾಗದಂತೆ ಕೃಷಿಕರು ಎಚ್ಚರ ವಹಿಸಬೇಕಾಗಿದೆ.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ