NEWS: ನ್ಯಾಚುರಲ್ಸ್ ಐಸ್ ಕ್ರೀಮ್ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ
Friday, May 17, 2024
ನ್ಯಾಚುರಲ್ಸ್ NATURALS ICE CREAM ಐಸ್ ಕ್ರೀಮ್ ಮೂಲಕ ಪ್ರಸಿದ್ಧಿಯಾಗಿದ್ದ ಮಂಗಳೂರು ಮೂಲದ ಉದ್ಯಮಿ ರಘುನಂದನ್ ಕಾಮತ್ (70) ಮುಂಬಯಿಯಲ್ಲಿ ನಿಧನ ಹೊಂದಿದರು. ಪತ್ನಿ, ಇಬ್ಬರು
ಪುತ್ರರನ್ನು ಅವರು ಅಗಲಿದ್ದಾರೆ.
ಮೂಲ್ಕಿಯವರಾಗಿದ್ದ
ಕಾಮತ್, ಎಳವೆಯಲ್ಲೇ ಮುಂಬೈಗೆ ತೆರಳಿ ಹೋಟೆಲ್ ಉದ್ಯಮ ಆರಂಭಿಸಿ ನ್ಯಾಚುರಲ್ಸ್
ಐಸ್ ಕ್ರೀಮ್ ಆರಂಭಿಸಿ, ನೈಸರ್ಗಿಕವಾಗಿ ದೊರಕುವ ವಸ್ತುಗಳಿಂದಲೇ ಐಸ್ ಕ್ರೀಮ್ ತಯಾರಿಸಿ ಗಮನ ಸೆಳೆದಿದ್ದರು. ಅದೀಗ ದೊಡ್ಡ ಉದ್ಯಮವಾಗಿ ವ್ಯಾಪಿಸಿದೆ.