ARIVU EIC: ಮಂಗಳೂರಿನ ಅರಿವು ವಿಶೇಷ ಮಕ್ಕಳ ಕಾಳಜಿ ಸಂಸ್ಥೆ, ಯೆನೆಪೊಯ ನರ್ಸಿಂಗ್ ಕಾಲೇಜು ಮಧ್ಯೆ ಸೇವಾ ಸಹಯೋಗ ಒಡಂಬಡಿಕೆ

ARIVU EIC: ಮಂಗಳೂರಿನ ಅರಿವು ವಿಶೇಷ ಮಕ್ಕಳ ಕಾಳಜಿ ಸಂಸ್ಥೆ, ಯೆನೆಪೊಯ ನರ್ಸಿಂಗ್ ಕಾಲೇಜು ಮಧ್ಯೆ ಸೇವಾ ಸಹಯೋಗ ಒಡಂಬಡಿಕೆ

ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಅರಿವು ಅರ್ಲಿ ಇಂಟರ್ ವೆನ್ಶನ್ ಸೆಂಟರ್ – ವಿಶೇಷ ಮಕ್ಕಳ ತರಬೇತಿ ಕೇಂದ್ರ ಹಾಗೂ ಯೆನೆಪೊಯಾ ನರ್ಸಿಂಗ್ ಕಾಲೇಜ್ ಪರಸ್ಪರ ಸೇವಾ ಸಹಯೋಗದ ತಿಳುವಳಿಕೆ ಪತ್ರದ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮ ಅರಿವು ಕೇಂದ್ರದಲ್ಲಿ ಮೇ. 15ರಂದು ನಡೆಯಿತು.
ಯೆನೆಪೊಯಾ ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಲೀನಾ ಕೆ.ಸಿ ಹಾಗೂ ಅರಿವು ಟ್ರಸ್ಟ್ ಅಧ್ಯಕ್ಷ ಡಾ. ಕೆ.ಎಸ್. ಭಟ್ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವ ಮೂಲಕ ಶುಭ ಹಾರೈಸಿ, ಎರಡೂ ಸಂಸ್ಥೆಗಳಿಂದ ವಿಶೇಷ ಅಗತ್ಯವುಳ್ಳ ಮಕ್ಕಳ ಮಾನಸಿಕ ವಿಕಾಸಕ್ಕೆ ಇದು ಸಹಕಾರಿಯಾಗಲಿ ಎಂದು ಹೇಳಿದರು.
ಅರಿವು ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಆರ್. ಭಟ್ ಅವರು ಸಂಸ್ಥೆಯ ಬೆಳವಣಿಗೆ ಕುರಿತು ವಿವರಿಸಿ, ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿದರು.
ಯೆನೆಪೊಯಾ ಮೆಡಿಕಲ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಶ್ ಎಂ. ಅವರು ವಿಶೇಷ ಅಗತ್ಯವುಳ್ಳ ಮಕ್ಕಳ ಆಹಾರ ಪದ್ಧತಿ ಹಾಗೂ ಬೆಳವಣಿಗೆಗೆ ಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಯೆನೆಪೊಯಾ ನರ್ಸಿಂಗ್ ಕಾಲೇಜಿನ ಮಾನಸಿಕ ಆರೋಗ್ಯ ವಿಭಾಗ ಮುಖ್ಯಸ್ಥ ಮತ್ತು ಪ್ರೊಫೆಸರ್ ಡಾ. ಬಿನಿಷ ಪಾಪಚ್ಚನ್, ಅಸೋಸಿಯೇಟ್ ಪ್ರೊಫೆಸರ್ ಗಳಾದ ವಿಜಿ ಪ್ರಸಾದ್ ಸಿ, ಸುಬಿನ್ ರಾಜ್ ಆರ್, ಉಪನ್ಯಾಸಕಿ ವಿನೀಷಾ, ಅರಿವು ಟ್ರಸ್ಟ್ ಕಾರ್ಯದರ್ಶಿ ಡಾ. ರಾಧಾಕೃಷ್ಣ ಬಿ. ಭಟ್, ಟ್ರಸ್ಟ್ ನ ಲೆಕ್ಕಪರಿಶೋಧಕ ಸಿಎ ಬಿ.ಅರವಿಂದ ಕೃಷ್ಣ, ಅರಿವು ಟ್ರಸ್ಟ್ ನ ವಿವಿಧ ಸಮಿತಿಗಳ ಸದಸ್ಯರಾದ ಡಾ. ಶೀತಲ್ ಉಳ್ಳಾಲ್, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗೂ ತಾಲೂಕು ಅಧ್ಯಕ್ಷೆ ಆಶಾಲತಾ, ಉಪನ್ಯಾಸಕಿ ತೇಜಸ್ವಿನಿ ರೈ, ಪತ್ರಕರ್ತ ಹರೀಶ ಮಾಂಬಾಡಿ, ಅರಿವು ಶಿಕ್ಷಕಿಯರಾದ ಸಹನಾ ಕಿರಣ್, ಯಶ್ವಿನಿ, ರಶ್ಮಿತಾ, ತಿಲೋತ್ತಮಾ, ರಮ್ಯಾ ಸಂದೀಪ್, ಜಯಶ್ರೀ ಉಪಸ್ಥಿತರಿದ್ದರು. ಯೆನಪೊಯಾ ನರ್ಸಿಂಗ್ ಸಂಸ್ಥೆಯ ರಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.  ಈ ಸಂದರ್ಭ ವಿಶೇಷ ಮಕ್ಕಳು ಹಾಗು ಯೆನೆಪೊಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮಗಳು ನಡೆದವು.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ