NDA: ಮೊದಲ ದಿನವೇ ಪಿಎಂ ಕಿಸಾನ್ ನಿಧಿಗೆ ಪ್ರಧಾನಿ ಸಹಿ, 20 ಸಾವಿರ ಕೋಟಿ ರೂ. ಬಿಡುಗಡೆ
ನರೇಂದ್ರ ಮೋದಿ ಸರಕಾರ ಮೂರನೇ ಅವಧಿಕೆ
ಅಸ್ತಿತ್ವಕ್ಕೆ ಬಂದ ಮೊದಲ ದಿನವೇ ರೈತರಿಗೆ ಗುಡ್ ನ್ಯೂಸ್!!.
ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ
ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ನೀಡುವ ಕಿಸಾನ್ ನಿಧಿಯ ಮೊತ್ತ ಬಿಡುಗಡೆಗೆ ಸಹಿ ಹಾಕಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ಈಗಾಗಲೇ ಆರು ವರ್ಷಗಳಿಂದ ರೈತರಿಗೆ
ವರ್ಷಕ್ಕೆ ಆರು ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಇದರಲ್ಲಿ ಪಿಎಂ ಕಿಸಾನ್ ನಿಧಿ
2024 ರ 17 ನೇ ಕಂತು ಬಿಡುಗಡೆಗೆ ಅನುಮತಿ ನೀಡಲಾಗಿದ್ದು, ಒಂದೆರಡು ದಿನಗಳಲ್ಲಿ ಭಾರತದ 9.3 ಕೋಟಿ
ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಭಾರತದಲ್ಲಿ ಕೇಂದ್ರ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಯಾಗಿದೆ. ಈ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯು 4 ತಿಂಗಳ ಮೂರು ಕಂತುಗಳಲ್ಲಿ ಪ್ರತಿ ವರ್ಷ 6000 ರೂ. ನೀಡುತ್ತದೆ. ಇದರಿಂದಾಗಿ ಫಲಾನುಭವಿಗಳು ವರ್ಷದ ಮೂರನೇ ತಿಂಗಳಿಗೆ 2000 ರೂ. ಪಡೆಯುತ್ತಾರೆ. ಕೇಂದ್ರ ಸರ್ಕಾರವು ಫೆಬ್ರವರಿ ತಿಂಗಳಿನಲ್ಲಿಯೇ ಪಿಎಂ ಕಿಸಾನ್‌ನ 16 ನೇ ಕಂತನ್ನು ಬಿಡುಗಡೆ ಮಾಡಿತ್ತು.
ಮೂರನೇ ಬಾರಿಗೆ ಪ್ರಧಾನಿಯಾಗಿ ಮೊದಲ ದಿನ ಕಚೇರಿಗೆ ಆಗಮಿಸಿದ
ಪ್ರಧಾನಿ ಅವರು ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ. ಅದು ಪಿಎಂ ಕಿಸಾನ್ ನಿಧಿಯದ್ದು ಎಂಬುದು
ವಿಶೇಷ.