ELECTION RESULT 2024: ಲೋಕಸಭೆಯಲ್ಲಿ ಯಾರಿಗೆ ಬಹುಮತ? ಸಮೀಕ್ಷೆಗಳು ನಿಜವಾಗುತ್ತಾ?

ELECTION RESULT 2024: ಲೋಕಸಭೆಯಲ್ಲಿ ಯಾರಿಗೆ ಬಹುಮತ? ಸಮೀಕ್ಷೆಗಳು ನಿಜವಾಗುತ್ತಾ?

 

ರಾಹುಲ್ ಗಾಂಧಿ ನೇತೃತ್ವ ಕಾಂಗ್ರೆಸ್ ಗೆ ಫಲ ನೀಡುತ್ತಾ? ಅಥವಾ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗ್ತಾರಾ? ಈ ಕುತೂಹಲಕ್ಕೆ ಇವತ್ತು ತೆರೆ ಬೀಳಲಿದೆ. 


ಈ ಬಾರಿ ಎಕ್ಸಿಟ್ ಪೋಲ್ಸ್ ನಿಜವಾಗುತ್ತಾ? ಲೋಕಸಭೆಯಲ್ಲಿ ಅಧಿಕಾರ ಯಾರಿಗೆ? ಮೋದಿ ನೇತೃತ್ವದ ಬಿಜೆಪಿ, ಎನ್.ಡಿ.ಎ.ಗೆ ಹ್ಯಾಟ್ರಿಕ್ ಗೆಲುವೇ? ಅಥವಾ ರಾಹುಲ್ ಗಾಂಧಿ ಏನಾದರೂ ಮ್ಯಾಜಿಕ್ ಮಾಡ್ತಾರಾ?

ಸಮೀಕ್ಷೆಗಳು ಏನೇ ಹೇಳಲಿ. ಇವತ್ತಿನ ಫಲಿತಾಂಶದತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಲೋಕಸಭಾ ಚುನಾವಣೆಯ 543 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಯಾರಿಗೆ ಎಷ್ಟು ಓಟು ಹಾಕಿದ್ದಾರೆ ಎಂಬ ಲೆಕ್ಕಾಚಾರಗಳು ಆರಂಭವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ರಿಸಲ್ಟ್ ಹೊರಬೀಳಲಿದೆ. ಬೆಳಗ್ಗೆ 8 ಗಂಟೆಯಿಂದ ವಿವಿಧ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ಪ್ರತಿಯೊಂದು ಮತ ಎಣಿಕೆ ಕೇಂದ್ರಗಳ ಪ್ರತಿಯೊಂದು ಟೇಬಲ್‌ಗೆ ಸೂಕ್ಷ್ಮ ವೀಕ್ಷಕ, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ

ಎಕ್ಸಿಟ್‌ ಪೋಲ್‌ ವರದಿ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನ ಗಳಿಸಬಹುದೇ? ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಜಾರಿ ಮಾಡಿರುವ ಕಾಂಗ್ರೆಸ್‌ಗೆ ಬಾರಿ ಹೆಚ್ಚು ಸ್ಥಾನಗಳು ದೊರಕಲಿವೆಯೇ? ಬಾಗಲಕೋಟೆ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಳಗಾವಿ, ಬಳ್ಳಾರಿ, ಬೀದರ್‌, ವಿಜಯಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕೋಡಿ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗುಲ್ಬರ್ಗ,ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು, ಉಡುಪಿ ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಯಾರು ಗೆಲುವು, ಬೆಂಗಳೂರು ಕ್ಷೇತ್ರಗಳಲ್ಲಿ ಯಾರಿಗೆ ಜಯಮಾಲೆ ಎಂಬ ಕುತೂಹಲಕ್ಕೆ ಕೆಲವೇ ಗಂಟೆಗಳಲ್ಲಿ ತೆರೆಬೀಳಲಿದೆ.


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ