SRINIVAS UNIVERSITY ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಓರಿಯೆಂಟೇಶನ್ ಕಾರ್ಯಕ್ರಮ
Monday, July 29, 2024
ಮಂಗಳೂರು: ನಗರದ ಶ್ರೀನಿವಾಸ ವಿಶ್ವವಿದ್ಯಾಲಯದಇನ್ಸ್ಟಿಟ್ಯೂಟ್‌ಆಫ್‌ಕಂಪ್ಯೂಟರ್ ಸಯನ್ಸ್ ಮತ್ತುಇನ್ಫಾರ್ಮೇಶನ್ ಸಯನ್ಸಸ್‌ಕಾಲೇಜಿನ ವತಿಯಿಂದ ೨೦೨೪-೨೫ ನೇ ಶೈಕ್ಷಣಿಕ ಸಾಲಿನ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್‌ಕಾರ್ಯಕ್ರಮವು ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು
ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸಿಎ ಎ. ರಾಘವೇಂದ್ರ ರಾವ್‌ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾದ ಹೊಸ ವಿದ್ಯಾರ್ಥಿಗಳಿಗೆ ಶುಭಕೋರಿ ಅವರಿಗೆಉಜ್ವಲ ಭವಿಷ್ಯ ಹಾರೈಸಿದರು.
ಉಪ ಕುಲಾಧಿಪತಿಗಳಾದ ಡಾ.ಎ. ಶ್ರೀನಿವಾಸ ರಾವ್ ಶಿಕ್ಷಣದಲ್ಲಿ ತಾಂತ್ರಿಕತೆಯನ್ನು ಹೆಚ್ಚಿನರೀತಿಯಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ನುರಿತ ವಿದ್ಯಾರ್ಥಿಗಳನ್ನಾಗಿ ಮಾಡುವಲ್ಲಿ ನಾವು ಸದಾ ಬದ್ಧರಾಗಿದ್ದೇವೆಎಂದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀನಿವಾಸ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾದ ವಿಜಯಲಕ್ಷ್ಮಿರಾವ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಮತ್ತೋರ್ವ ಸದಸ್ಯೆ ಪ್ರೊ.ಎಂಜಿನಿಯರ್ ಮಿತ್ರಾ ಎಸ್. ರಾವ್ ನೂತನ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.ಶ್ರೀನಿವಾಸ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ಸತ್ಯನಾರಾಯಣರೆಡ್ಡಿ ಸಭಿಕರಿಗೆ ವಿಶ್ವವಿದ್ಯಾಲಯದ ಬಗ್ಗೆ ಮಾಹಿತಿ ನೀಡಿದರು.
ಇನ್ಸ್ಟಿಟ್ಯೂಟ್‌ಆಫ್‌ಕಂಪ್ಯೂಟರ್ ಸಯನ್ಸ್‌ಅಂಡ್‌ಇನ್ಫಾರ್ಮೇಶನ್ ಸಯನ್ಸ್‌ಡೀನ್ ಡಾ.ಸುಬ್ರಹ್ಮಣ್ಯ ಭಟ್ ಸಭಿಕರನ್ನು ಸ್ವಾಗತಿಸಿ ವಿಶ್ವವಿದ್ಯಾಲಯದಎಲ್ಲಾ ಪದಾಧಿಕಾರಿಗಳನ್ನು ಪರಿಚಯಿಸಿದರು.ಬಿ.ಸಿ.ಎ. ವಿಭಾಗದ ಮುಖ್ಯಸ್ಥರಾದ ಪ್ರೊ. ಪಿ. ಶ್ರೀಧರ ಆಚಾರ್ಯ ವಂದಿಸಿದರು.ಪ್ರೊ.ರಿಯಾ ಮತ್ತು ಪ್ರೊ. ರಾಧಿಕಾ ಮಲ್ಯಕಾರ್ಯಕ್ರಮ ನಿರೂಪಿಸಿದರು.
೩ ದಿನದಓರಿಯೆಂಟೇಶನ್‌ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜ್‌ಟುಕಾರ್ಪೊರೇಟ್, ಡ್ರಗ್‌ಅವೇರ್‌ನೆಸ್ ಮತ್ತುಓಆPSಆಕ್ಟ್, ಸೈಬರ್‌ಕ್ರೈಮ್, ಟೀಮ್ ಬಿಲ್ಡಿಂಗ್, ಕಮ್ಯೂನಿಕೇಶನ್ ಸ್ಕಿಲ್ಸ್ ಮುಂತಾದ ವಿಷಯಗಳ ಬಗ್ಗೆ ವಿವಿಧ ಉಪನ್ಯಾಸಗಳು ಹಾಗೂ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನಅಧ್ಯಾಪಕ ವೃಂದ, ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ತಮ್ಮ ಹೆತ್ತರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.