NEWS: ಹಂಪನಕಟ್ಟೆ ಬಸ್ ತಂಗುದಾಣ ತೆರವಿನಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ: ಎಬಿವಿಪಿ ಪ್ರತಿಭಟನೆ
Thursday, September 12, 2024
ಮಂಗಳೂರು: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಹಂಪ್ಪನಕಟ್ಟೆಯ ಬಸ್ಸು ತಂಗುದಾಣ ಏಕಾಏಕಿ ತೆರವುಗೊಳಿಸಿ ವಿದ್ಯಾರ್ಥಿ ಸಮುದಾಯಕ್ಕೆ ಆಗಿರುವ ಸಮಸ್ಯೆ ಕುರಿತು ಈ ಹಿಂದೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದ್ದರು ಕೂಡ ಸಮಸ್ಯೆ ಬಗೆಹರಿಯಲಿಲ್ಲ ಎಂದು ಆರೋಪಿಸಿ ಮಂಗಳೂರಿನ ಕೇಂದ್ರ ಭಾಗ ಕ್ಲಾಕ್ ಟವರ್ ಬಳಿ ಎಬಿವಿಪಿಯಿಂದ ಪ್ರತಿಭಟನೆ ಮಾಡಲಾಯಿತು. ಸಂಬಂಧಪಟ್ಟ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರಬೇಕೆಂದು ಎಬಿವಿಪಿ ಕಾರ್ಯಕರ್ತರು ಅಗ್ರಹಿಸಿದರು, ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆಯನ್ನ ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಸುವಿತ್, ತಾಲೂಕು ಸಂಚಾಲಕ ಶ್ರೇಯಸ್ ಮತ್ತು ಕಾರ್ಯಕರ್ತರಾದ ಮೋನಿಶ್, ಪ್ರತೀಕ್ ಬಂಟ್ವಾಳ, ಶಶಾಂಕ್, ನಿಖಿತ್, ಸಾತ್ವಿಕ್, ಇನ್ನಿತರರು ಉಪಸ್ಥಿತರಿದ್ದರು.