-->
NEWS: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ, ಸಂಗೀತ ಸಾಧಕ ವಿದ್ವಾನ್ ಶ್ರೀ ಎಸ್ ಆರ್ ಕೃಷ್ಣಮೂರ್ತಿ ಅವರಿಗೆ ಗೌರವಾರ್ಪಣೆ

NEWS: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ, ಸಂಗೀತ ಸಾಧಕ ವಿದ್ವಾನ್ ಶ್ರೀ ಎಸ್ ಆರ್ ಕೃಷ್ಣಮೂರ್ತಿ ಅವರಿಗೆ ಗೌರವಾರ್ಪಣೆ

 

ತಮ್ಮ ದಿವ್ಯಾಂಗತೆಯನ್ನು ಮೆಟ್ಟಿ ನಿಂತು, ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ವಿದ್ವಾನ್ ಎಸ್.ಆರ್.ಕೃಷ್ಣಮೂರ್ತಿ ಅವರ ಸೇವೆಯನ್ನು ಗುರುತಿಸಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ಗೌರವಿಸಲಾಯಿತು.

ವಿದ್ವಾನ್  ಎಸ್ ಆರ್ ಕೃಷ್ಣಮೂರ್ತಿಯವರು ಮೂಲತಃ ತಮಿಳುನಾಡಿನ ಕೊಯಂಬತ್ತೂರ್ ನಿವಾಸಿ, ಹುಟ್ಟಿನಿಂದಲೇ ದಿವ್ಯಾಂಗರು, ಪ್ರಾಯ 79 ವರ್ಷ, ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಯುಳ್ಳವರಾಗಿದ್ದ ಇವರು ಹತ್ತು ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ವಿಶೇಷ ಹೆಗ್ಗಳಿಕೆ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ರವರು ತಮ್ಮ ಆಡಳಿತದ ಅವಧಿಯಲ್ಲಿ ಇವರನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.ಶ್ರೀ ಎಸ್ ಆರ್ ಕೃಷ್ಣಮೂರ್ತಿಯವರು ತಮ್ಮ ಅಭಿನಯದ ಸಾಮರ್ಥ್ಯವನ್ನು ಪ್ರಸಿದ್ಧ ತಮಿಳು ಚಲನಚಿತ್ರ ನಾನು ಕಡವುಲ್ ಮೂಲಕ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಇವರು ಆಕಾಶವಾಣಿಯ ಕರ್ನಾಟಕ ಸಂಗೀತದ ಗ್ರೇಡ್ ಕಲಾವಿದರಾಗಿರುತ್ತಾರೆ. ರಾಷ್ಟ್ರಪತಿ ಅಬ್ದುಲ್ ಕಲಾಂ ರವರು ಕೂಡ ಇವರಿಂದ ಪ್ರಭಾವಿತರಾದವರು ತಮ್ಮೆಲ್ಲ ದಿನಚರಿಯನ್ನು ಯಾರೊಬ್ಬರ ಸಹಾಯವಿಲ್ಲದೆ ನಿರ್ವಹಿಸುವುದರೊಂದಿಗೆ ಅಭೂತಪೂರ್ವ ಚಿತ್ರಕಲಾ ಪ್ರವೀಣರಾಗಿದ್ದಾರೆ. ಅವರ ಜೀವನ ಸಾಧನೆಗಳು, ಮನುಷ್ಯನಿಗೆ ಮನಸ್ಸಿದ್ದರೆ ಏನನ್ನು ಸಾಧಿಸಭಲ್ಲ ಎಂದು ಸಾರಿ ಹೇಳುತ್ತಿದೆ. ಇವರು ಸಮಾಜಕ್ಕೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಇಂದು ನಡೆದ ಗೌರವ ಸಮರ್ಪಣಾ ಸಂದರ್ಭದಲ್ಲಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ರಾಜಶೇಖರ್ ಭಟ್ ಕಾಕುಂಜೆ, ಕಾರ್ಯದರ್ಶಿ ಹರೀಶ್ ಪ್ರಭು, ಸಹ ಕಾರ್ಯದರ್ಶಿ ಭಾಸ್ಕರ್ ಹೊಸಮನೆ, ಖಜಾಂಚಿಯವರಾದ ಸತೀಶ್ ರಾವ್ , ಮತ್ತು ಸದಸ್ಯರಾದ ಶ್ಯಾಮಲ ಭಟ್ ಕಾಕುಂಜೆ, ಗೀತಾ ಲಕ್ಷ್ಮೀಶ್, ಅನುಷಾ ಭಟ್ ಕಾಕುಂಜೆ ಉಪಸ್ಥಿತರಿದ್ದರು


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ