-->
MANGALORE: 'ಜ.14ರಂದು ರಸ ಬೈ ರಾಗ ಸಂಗೀತ ಕಛೇರಿ, ವಿವರಗಳು ಇಲ್ಲಿವೆ

MANGALORE: 'ಜ.14ರಂದು ರಸ ಬೈ ರಾಗ ಸಂಗೀತ ಕಛೇರಿ, ವಿವರಗಳು ಇಲ್ಲಿವೆ

 

ಮಂಗಳೂರು: ಸ್ವರಾಲಯ ಸಾಧನಾ ಫೌಂಡೇಶನ್ ವತಿಯಿಂದ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಸ್ವರ ಸಂಕ್ರಾಂತಿ ಉತ್ಸವದಲ್ಲಿ ಖ್ಯಾತ ಕಲಾವಿದರಾದ ರಂಜನಿ ಗಾಯತ್ರಿ ಅವರ `ರಸ ಬೈ ರಾಗ' ಸಂಗೀತ ಕಛೇರಿ ಹಾಗೂ `ಸ್ವರ ಸಾಧನಾ' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜ.14ರಂದು ನಡೆಯಲಿದೆ.

ಮಧ್ಯಾಹ್ನ 2 ಗಂಟೆಯಿಂದ ಕಲಾ ಶಾಲೆ ವಿದ್ಯಾರ್ಥಿಗಳಿಂದ ವಯಲಿನ್ ಪ್ರಸ್ತುತಿ ನಡೆಯಲಿದ್ದು, ಮಧ್ಯಾಹ್ನ 3.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಮೂವರು ಹಿರಿಯ ಸಾಧಕರಿಗೆ `ಸ್ವರ ಸಾಧನಾ 25' ಪ್ರಶಸ್ತಿ ಪ್ರದಾನ ನಡೆಯಲಿದೆ. ನಿಡಸೋಸಿ ಶ್ರೀ ದುರದುಂದೀಶ್ವರ ಮಠದ ಜಗದ್ಗುರು ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಹಾಗೂ ಬಾಳೆಕುದ್ರು ಮಠದ ಶ್ರೀಮದ್ ಜಗದ್ಗುರು ಶ್ರೀ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹಾಗೂ ಸ್ವರ ರತ್ನ ವಿದ್ವಾನ್ ವಿಠಲ್ ರಾಮಮೂರ್ತಿ ಭಾಗವಹಿಸಲಿದ್ದಾರೆ.

ಪ್ರಸಿದ್ಧ ಮೃದಂಗ ವಾದಕ ನೈಬಿ ಪ್ರಭಾಕರ ಶೃಂಗೇರಿ ಮತ್ತು ಸಂಗೀತ ಕ್ಷೇತ್ರದ ಸಾಧಕಿ ಸಾವಿತ್ರಿ ಪ್ರಭಾರ್ಕಯ ದಂಪತಿ, ಭರತನಾಟ್ಯ ಕ್ಷೇತ್ರದ ಸಾಧಕಿ, ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರು ಶಾರದಾ ಮಣಿಶೇಖರ್ ಹಾಗೂ ಮೃದಂಗದ ಸಾಧಕರಾದ ವಿದ್ವಾನ್ ಕುಂಜೂರು ಎಚ್.ರವಿಕುಮಾರ್ ಅವರಿಗೆ ಸ್ವರ ಸಾಧನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಸಂಜೆ 5 ಗಂಟೆಯಿಂದ `ರಸ ಬೈ ರಾಗ' ಕಛೇರಿ ನಡೆಯಲಿದ್ದು, ವಯಲಿನ್ ನಲ್ಲಿ ವಿದ್ವಾನ್ ವಿಠ್ಠಲ್ ರಂಗಲ್, ಮೃದಂಗದಲ್ಲಿ ವಿದ್ವಾನ್ ಸಾಯಿ ಗಿರಿಧರ್, ಘಟಂನಲ್ಲಿ ವಿದ್ವಾನ್ ಎಸ್.ಕೃಷ್ಣ ಸಹಕರಿಸಲಿದ್ದಾರೆ

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ