
Dakshina Kannada: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ಸಂಸ್ಥಾಪನಾ ದಿನಾಚರಣೆ
Saturday, June 21, 2025
ಮಂಗಳೂರು: ಸಕ್ಷಮ ದ.ಕ.ಜಿಲ್ಲಾ ಘಟಕವು ಸಕ್ಷಮ ಸಂಸ್ಥಾಪನಾ ದಿನದ ಆಚರಣೆಯ ಸಲುವಾಗಿ ಪುತ್ತೂರು ಮುರದಲ್ಲಿನ "ಶಿವಸದನ"ಹಿರಿಯ ನಾಗರಿಕರ ವಸತಿ ನಿಲಯ ಮತ್ತು ವಿಶೇಷ ಚೇತನರ ಆಶ್ರಯಧಾಮಕ್ಕೆ ಭೇಟಿ ನೀಡಿತು.
ಸಕ್ಷಮ
ಜಿಲ್ಲಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಜೊತೆಯಲ್ಲಿ
ಉಪಾಧ್ಯಕ್ಷ ವಾರಣಾಸಿ ಗಣೇಶ ಭಟ್, ಕಾರ್ಯದರ್ಶಿ ಹರೀಶ್ ಪ್ರಭು, ಕೋಶಾಧಿಕಾರಿ ಸತೀಶ್ ರಾವ್, ಸಹಕಾರ್ಯದರ್ಶಿ
ಭಾಸ್ಕರ ಹೊಸಮನೆ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಸಕ್ಷಮ ಘಟಕದ
ಸದಸ್ಯ ಉಮೇಶ್ ನಾಯಕ್ ಉಪಸ್ಥಿತರಿದ್ದರು.
ಸಂಸ್ಥೆಯಲ್ಲಿರುವ
ಹಿರಿಯ ನಾಗರಿಕರನ್ನು ಶಿವಸದನದ ಸಂಸ್ಥಾಪಕ ಬೆಳ್ಳೆ ಕರುಣಾಕರ ರಾವ್ ಪರಿಚಯಿಸಿದರು. ಸಂಸ್ಥೆಯ ವ್ಯವಸ್ಥಾಪಕಿ
ಸುಮತಿ ಮಾಹಿತಿ ನೀಡಿದರು. ಇದೇ ಕಟ್ಟಡದಲ್ಲಿ ವಿಶೇಷ ಚೇತನರ ಶಾಲೆಯನ್ನೂ ನಡೆಸುತ್ತಿದ್ದು ಅಲ್ಲಿನ
4 ಮಂದಿ ಶಿಕ್ಷಕರ ಮತ್ತು ಸಹಾಯಕರ ನ್ನು ಪರಿಚಯಿಸಿದರು ವಿಶೇಷಚೇತನರಿಗಾಗಿ ಶೈಕ್ಷಣಿಕ ಕಲಿಕಾ ಸಾಮಗ್ರಿ ಗಳನ್ನು ಸಕ್ಷಮ
ಜಿಲ್ಲಾ ವತಿಯಿಂದ ವಿತರಿಸಲಾಯಿತು.